ಸಿಬಿಎಸ್‌ಇ ಫಲಿತಾಂಶ : ಕಾವ್ಯಾಶ್ರೀ ಪ್ರಥಮ

ಮುಂಡಗೋಡ.ಜೂ,5 : ಲೋಯಲಾ ಶಾಲೆಯ ಸಿಬಿಎಸ್‌ಇ ಹತ್ತನೇ ತರಗತಿಯ ಫಲಿತಾಂಶದಲ್ಲಿ ಪಟ್ಟಣದ ಕುಮಾರಿ ಕಾವ್ಯಾಶ್ರೀ ಕಿರಣ ವೆರ್ಣೇಕರ, ಮನೋಜ ಪಿ.ಎಮ್. ಹಾಗೂ ಸ್ನೇಹಾ ಶಿವಾಜಿ ಪಾಟೀಲ ಪ್ರಥಮದ ಮೂರು ಸ್ಥಾನಗಳನ್ನು ಪಡೆದವರಾಗಿದ್ದಾರೆ.
ಲೋಯಲಾ ಕೇಂದ್ರಿಯ ವಿದ್ಯಾಲಯದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಎಲ್ಲ 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಯ ಫಲಿತಾಂಶ ನೂರಕ್ಕೆ ನೂರು ಆಗಿದೆ ಎಂದು ಪ್ರಾಚಾರ್ಯ ರೂಪಾ ಮಸ್ಕೇರಿ ತಿಳಿಸಿದ್ದಾರೆ
Next Story





