ಹಾಸ್ಟೆಲ್ ನೌಕರರ ಧರಣಿ
ಉಡುಪಿ, ಜೂ.5: ಕರ್ನಾಟಕ ರಾಜ್ಯ ಸರಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸೇವೆಯನ್ನು ಖಾಯಂಗೊಳಿ ಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜೂ.6ರಂದು ಬೆಳಿಗ್ಗೆ 11:30 ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಹೊರಗುತ್ತಿಗೆಗೆ ನೌಕರರು, ಅಡುಗೆ ಮಾಡುವವರಿಗೆ, ಸ್ವಚ್ಛತಾ ಸಿಬ್ಬಂದಿಯ ವರಿಗೆ ಕಾವಲು ಕಾಯುವವರಿಗೆ 10ನೆ ತರಗತಿ ಪಾಸಾಗಿರಬೇಕೆಂಬ ಷರತ್ತು ವಿಧಿಸಿ ನೇರ ನೇಮಕಾತಿ ಮಾಡುತ್ತಿದ್ದು, ಇದರಿಂದ ಕಳೆದ ಹಲವು ವರ್ಷ ಗಳಿಂದ ಆ ಹುದ್ದೆಗಳಲ್ಲಿ ದುಡಿಯುತ್ತಿರುವ ನೌಕರರು ಕೆಲಸ ಕಳೆದುಕೊಂಡು ಬೀದಿ ಪಾಲಾಗುವಂತಾಗಿದೆ.
ನೇರ ನೇಮಕಾತಿ ಕ್ರಮವನ್ನು ಕೈಬಿಟ್ಟು ಅಗತ್ಯ ಬಿದ್ದರೆ ನೇಮಕಾತಿ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ತರಬೇಕು ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





