ಉಚಿತ ಚರ್ಮರೋಗ ಚಿಕಿತ್ಸಾ ಶಿಬಿರ

ಉಡುಪಿ, ಜೂ.5: ಉಡುಪಿ ಮಹಿಳಾ ಗ್ರಾಹಕರ ಸಂಘ ಮತ್ತು ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಚರ್ಮರೋಗ ಚಿಕಿತ್ಸಾ ಶಿಬಿರವನ್ನು ಉಡುಪಿ ಮಹಿಳಾ ಗ್ರಾಹಕರ ಸಂಘದಲ್ಲಿ ರವಿವಾರ ಆಯೋಜಿಸ ಲಾಗಿತ್ತು. ಶಿಬಿರವನ್ನು ಚರ್ಮರೋಗ ತಜ್ಞ ಡಾ.ಸನತ್ ರಾವ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಜಯಂಟ್ಸ್ ವಲಯ ನಿರ್ದೇಶಕ ದೇವದಾಸ ಕಾಮತ್, ಉಡುಪಿ ಜಯಂಟ್ಸ್ ಗ್ರೂಪ್‌ನ ಅಧ್ಯಕ್ಷೆ ಉಷಾ ರಮೇಶ್, ಕಾರ್ಯದರ್ಶಿ ಜಯ ವಿಜಯ, ವೈದ್ಯಕೀಯ ಮಾರಾಟ ಪ್ರತಿನಿಧಿ ಸಂಘದ ಅಧ್ಯಕ್ಷ ಶ್ರೀನಾಥ್ ಕೋಟ, ರಾಘವೇಂದ್ರ ಪ್ರಭು ಕರ್ವಾಲು ಮೊದಲಾದವರು ಉಪಸ್ಥಿತರಿದ್ದರು.
ಮಹಿಳಾ ಗ್ರಾಹಕರ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ ಮಹೇಶ್ ಸ್ವಾಗತಿಸಿದರು. ಮಹಿಳಾ ವೇದಿಕೆಯ ಉಪಾಧ್ಯಕ್ಷೆ ವತ್ಸಲಾ ಅಮೀನ್ ವಂದಿಸಿದರು. ರವಿರಾಜ್ ಎಚ್.ಪಿ. ಕಾರ್ಯಕ್ರಮ ನಿರೂಪಿಸಿದರು. ನೂರಾರು ಮಹಿಳೆಯರು ಕಾರ್ಯ ಕ್ರಮದ ಪ್ರಯೋಜನ ಪಡೆದುಕೊಂಡರು.
Next Story





