ಜೂ.6: ಭವಿಷ್ಯ ನಿಧಿ ಚಲೋ
ಉಡುಪಿ, ಜೂ.5: ಕಾರ್ಮಿಕ ಭವಿಷ್ಯನಿಧಿ ಸಂಘಟನೆಯ ವಿಳಂಬ ನೀತಿ, ಏಕಪಕ್ಷೀಯ, ಅವಸರದ ಕಾರ್ಯಯೋಜನೆಗಳ ವಿರುದ್ಧ ಮತ್ತು 6,000ರೂ. ಮಾಸಿಕ ಪಿಂಚಣಿಗೆ ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಭವಿಷ್ಯ ನಿಧಿ ಚಲೋ ಕಾರ್ಯಕ್ರಮವನ್ನು ಜೂ.6ರಂದು ಬೆಳಗ್ಗೆ 11ಗಂಟೆಗೆ ಉಡುಪಿ ಪಿಪಿಸಿ ರಸ್ತೆಯಲ್ಲಿ ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ ಎದುರು ಹಮ್ಮಿಕೊಳ್ಳ ಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





