ವಿಜಯಬ್ಯಾಂಕ್‌ನಿಂದ ನಗರಸಭೆಗೆ 5.25 ಲಕ್ಷ ರೂ.

ಉಡುಪಿ, ಜೂ.5: ವಿಜಯಾ ಬ್ಯಾಂಕ್, ತನ್ನ ಸಾಮಾಜಿಕ ಸಾಂಸ್ಥಿಕ ಜವಾಬ್ದಾರಿ(ಸಿಎಸ್‌ಆರ್) ನಿಧಿಯಡಿ ಉಡುಪಿ ನಗರಸಭೆಗೆ ಪ್ರಾಥಮಿಕ ಕಸ ಸಂಗ್ರಹಣೆಗಾಗಿ ವಾಹನ ಖರೀದಿಗೆ 5.25 ಲಕ್ಷ ರೂ.ಗಳ ಮಂಜೂರಾತಿ ಪತ್ರವನ್ನು ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹಾಗೂ ಪೌರಾಯುಕ್ತರಿಗೆ ಡಿ.ಮಂಜುನಾಥಯ್ಯ ಅವರಿಗೆ ಹಸ್ತಾಂತರಿಸಿತು.
ಸೋಮವಾರ ನಗರಸಭೆಯ ಸತ್ಯಮೂರ್ತಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಪತ್ರವನ್ನು ಹಸ್ತಾಂತರಿಸಿ ಮಾತನಾಡಿದ ವಿಜಯಾ ಬ್ಯಾಂಕಿನ ಡಿಜಿಎಂ ಎಂ.ಜೆ.ನಾಗರಾಜ್, ಉಡುಪಿ ವಲಯ ಕಚೇರಿಯ ವತಿಯಿಂದ ಈಗಾಗಲೇ ಸಿಎಸ್‌ಆರ್ ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಕಳೆದ ಅಕ್ಟೋಬರ್ ತಿಂಗಳಲ್ಲಿ ಒಂದೇ ದಿನ ಒಟ್ಟು 56 ಬಡ ಹೆಣ್ಣು ಮಕ್ಕಳನ್ನು ದತ್ತು ಪಡೆದು, ಅವರ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಈವರೆಗೆ ವಿಜಯಾ ಬ್ಯಾಂಕ್ ಉಡುಪಿ ವಲಯ ವ್ಯಾಪ್ತಿಯಲ್ಲಿ ಒಟ್ಟು 89 ಬಾಲಕಿಯರನ್ನು ದತ್ತು ಸ್ವೀಕರಿಸಿದೆ ಎಂದರು.
ಬೆಳಪು ಸರಕಾರಿ ಶಾಲೆಗೆ ಇತ್ತೀಚೆಗೆ ಎರಡು ಶೌಚಾಲಯವನ್ನು ನಿರ್ಮಿಸಿ ಕೊಟ್ಟಿದೆ. ಕಮಂಡೇಲುವಿನ ನೂರಾರು ವರ್ಷಗಳಷ್ಟು ಹಳೆಯದಾದ ಶಾಲೆಗೂ ಎರಡು ಶೌಚಾಲಯ ನಿರ್ಮಿಸಿ ಅವರ ಸಂಪೂರ್ಣ ನಿರ್ವಹಣೆಯ ವೆಚ್ಚವನ್ನೂ ಬ್ಯಾಂಕ್ ಭರಿಸುತ್ತಿದೆ. ಅಲ್ಲದೇ ಉಡುಪಿ ಜಿಲ್ಲೆಯ ಏಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಒಂದು ಗ್ರಾಮಗಳಿಗೆ ಉಚಿತ ವೈಫೈ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ 4ಕಿಮೀ. ವ್ಯಾಪ್ತಿಯಲ್ಲಿ ಈ ಸೌಲಭ್ಯ ಜನರಿಗೆ ಉಚಿತವಾಗಿ ಸಿಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಭಾರೀ ಪ್ರಯೋಜನವಾಗಿರುವುದು ತಮಗೆ ತೃಪ್ತಿ ತಂದಿದೆ ಎಂದರು.
ಇತ್ತೀಚೆಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.94.24 (589) ಅಂಕ ಗಳಿಸಿದ ಪಡುಬೆಳ್ಳೆ ಶ್ರೀನಾರಾಯಣಗುರು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಬಡ ಕೂಲಿ ಕಾರ್ಮಿಕಳ ಮಗಳು ಸೌಮ್ಯಳನ್ನು ವಿಜಯಾಬ್ಯಾಂಕ್ ದತ್ತು ಸ್ವೀಕರಿಸಲು ನಿರ್ಧರಿಸಿದ್ದು, ಆಕೆಯ ಸ್ನಾತಕೋತ್ತರ ಪದವಿಯವರೆಗಿನ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದೆ ಎಂದು ನಾಗರಾಜ್ ತಿಳಿಸಿದರು.
ಇತ್ತೀಚೆಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.94.24 (589) ಅಂಕ ಗಳಿಸಿದ ಪಡುಬೆಳ್ಳೆ ಶ್ರೀನಾರಾಯಣಗುರು ಕನ್ನಡ ಮ್ಯಾಮಶಾಲೆಯವಿದ್ಯಾರ್ಥಿನಿ,ಬಡ ಕೂಲಿ ಕಾರ್ಮಿಕಳ ಮಗಳು ಸೌಮ್ಯಳನ್ನುವಿಜಯಾಬ್ಯಾಂಕ್ ದತ್ತು ಸ್ವೀಕರಿಸಲು ನಿರ್ಧರಿಸಿದ್ದು, ಆಕೆಯ ಸ್ನಾತಕೋತ್ತರ ಪದವಿಯವರೆಗಿನ ಪೌರಾಯುಕ್ತ
ಡಿ.ಮಂಜುನಾಥಯ್ಯ ಮಾತನಾಡಿ, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಹಾಗೂ ಸ್ವಚ್ಛತಾ ಕಾರ್ಯಕ್ಕೆ ಒಟ್ಟು 52 ವಾಹನಗಳ ಅಗತ್ಯವಿದ್ದು, ಈಗ ಕೇವಲ 19 ಮಾತ್ರ ನಗರಸಭೆಯಲ್ಲಿದೆ. ವಿವಿಧ ದಾನಿಗಳ ನೆರವಿನಿಂದ ಮೂರು ವಾಹನಗಳ ಸದ್ಯವೇ ಸೇರ್ಪಡೆಗೊಳ್ಳಲಿದೆ. ಇದೀಗ ವಿಜಯಾ ಬ್ಯಾಂಕ್ ಸಹ ಒಂದು ವಾಹನವನ್ನು ಖರೀದಿಸಿ ನೀಡಲಿದೆ. ಇದರೊಂದಿಗೆ ನಗರಸಭಾ ವ್ಯಾಪ್ತಿಯಲ್ಲಿ ಫ್ಲಾಸ್ಟಿಕ್ ಬಳಕೆ ನಿಷೇಧಿಸಿರುವುದರಿಂದ ಮನೆ ಮನೆಗೆ ಬಟ್ಟೆ ಚೀಲವನ್ನು ವಿತರಿಸಲು ವಿಜಯಾ ಬ್ಯಾಂಕ್ ಒಂದು ಲಕ್ಷ ರೂ.ಗಳನ್ನು ಮೂರು ಕಂತುಗಳಲ್ಲಿ ನೀಡಲು ಒಪ್ಪಿಕೊಂಡಿದೆ ಎಂದರು.
ಸಮಾರಂಭದಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ವಿಜಯಾ ಬ್ಯಾಂಕ್‌ನ ಚೀಫ್ ಮ್ಯಾನೇಜರ್ ಝಿಲಾನಿ ಬಾಷಾ, ಮ್ಯಾನೇಜರ್ ನೇಹಾ ಉಪಸ್ಥಿತರಿದ್ದರು. ನಗರಸಭೆಯ ಪರಿಸರ ಅಧಿಕಾರಿ ಬಿ.ಎಸ್.ರಾಘವೇಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.







