ಕೊಂಕಣ ರೈಲ್ವೆಯಿಂದ ಪರಿಸರ ದಿನ ಆಚರಣೆ

ಉಡುಪಿ, ಜೂ.5: ಉಡುಪಿಯ ಎಇಎನ್ ಕಚೇರಿಯಲ್ಲಿ ಗಿಡವೊಂದನ್ನು ನೆಡುವ ಮೂಲಕ ಕೊಂಕಣ ರೈಲ್ವೆಯು ಉಡುಪಿಯಲ್ಲಿ ಇಂದು ವಿಶ್ವ ಪರಿಸರ ದಿನವನ್ನು ಆಚರಿಸಿತು.
ಉದ್ಯಾವರದ ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಉಡುಪಿಯ ಎಇಎನ್ ಕಚೇರಿ ಎದುರು ನಿರ್ಮಿಸಲಾಗುತ್ತಿರುವ ವನದಲ್ಲಿ ಔಷಧೀಯ ಸಸ್ಯವೊಂದನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.
ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಶ್ರೀಕಾಂತ್ ಯು., ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶ್ರೀಕಾಂತ್, ಡಾ.ಚೈತ್ರ ಹಾಗೂ ನಾಗರಾಜ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಗಿಡ ನೆಟ್ಟು, ಬೆಳೆಸುವ ಕುರಿತು ಮಾಹಿತಿಗಳನ್ನು ನೀಡಿದರು.
ಕೊಂಕಣ ರೈಲ್ವೆಯ ಡೆಪ್ಯುಟಿ ಸಿಎಂಒ ಡಾ.ಸ್ಟೀವನ್ ಜೋರ್ಜ್, ಎಇಎನ್ ಗೋಪಾಲಕೃಷ್ಣ, ಎಇಇ ಬಾಬು ಕೇಡ್ಲೆ ಅವರೂ ಈ ಸಂದರ್ಭದಲಲಿ ಉಪಸ್ಥಿತರಿದ್ದರು.
Next Story





