ಕೊಲ್ಯ: ಕಾರು ಢಿಕ್ಕಿ: ಬೈಕ್ ಸವಾರನಿಗೆ ಗಾಯ
ಉಳ್ಳಾಲ, ಜೂ.5: ಕೊಲ್ಯದಲ್ಲಿ ಕಾರೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಕೊಲ್ಯ ನಿವಾಸಿ ಉದಯ್ ಕುಮಾರ್(39) ಗಾಯಗೊಂಡ ಬೈಕ್ ಸವಾರ.
ಉದಯ್ ತೊಕ್ಕೊಟ್ಟಿನಿಂದ ಕೊಲ್ಯದ ಕಡೆ ಹೋಗುತ್ತಿದ್ದ ವೇಳೆ ನಿವೃತ್ತ ಎಎಸ್‌ಐ ಸುಂದರ್ ಆಚಾರಿ ಎಂಬವರು ತನ್ನ ಆಲ್ಟೋ ಕಾರನ್ನು ಅತೀ ವೇಗವಾಗಿ ಯದ್ವಾತದ್ವಾ ಚಲಯಿಸುತ್ತಾ ಬಂದು ಬೈಕಿಗೆ ಢಿಕ್ಕಿ ಹೊಡೆದರು ಎಂದು ದೂರಲಾಗಿದೆ. ಗಾಯಗೊಂಡ ಉದಯ್ ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





.jpg.jpg)

