JAMWAದ ವತಿಯಿಂದ ಇಫ್ತಾರ್ ಕೂಟ

ಸೌದಿ ಅರೇಬಿಯಾ, ಜೂ.5: ಜೋಕಟ್ಟೆ ಏರಿಯಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (JAMWA) ಸೌದಿ ಅರೇಬಿಯಾದ ಜೆದ್ದಾ ಘಟಕವು “ದಿ ವಿಲೇಜ್ ರೆಸ್ಟೊರೆಂಟ್” ನಲ್ಲಿ ಇಫ್ತಾರ್ ಕಾರ್ಯಕ್ರಮವನ್ನು ಆಯೋಜಿಸಿತು. ಕಾರ್ಯಕ್ರಮದಲ್ಲಿ ಜೆದ್ದಾದಲ್ಲಿ ವಾಸವಿರುವ ಬ್ಯಾರಿ ಸಮುದಾಯದ ನಾಯಕರು ಪಾಲ್ಗೊಂಡರು.
ಜೋಕಟ್ಟೆ ಏರಿಯಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ 2004 ರಲ್ಲಿ ಸೌದಿ ಅರೇಬಿಯಾದ ರಿಯಾದಿನಲ್ಲಿ ತನ್ನ ಸ್ಥಾಪನೆಯ ಮೊದಲ ಹೆಜ್ಜೆ ಇಟ್ಟುಕೊಂಡಿತು. ನಂತರ ದಮ್ಮಾಮ್-ಜುಬೈಲ್ ಮತ್ತು ಜೆದ್ದಾ ಘಟಕಗಳಾಗಿ ವಿಸ್ತರಣೆಗೊಂಡಿತು. ಜೋಕಟ್ಟೆಯ ಸಮಾನ ಮನಸ್ಕ ಯುವಕರ ಉತ್ಸಾಹಪೂರ್ಣ ನಾಯಕತ್ವದಲ್ಲಿ ಜೋಕಟ್ಟೆ ಮತ್ತು ನೆರೆಯ ಗಲ್ಫ್ ಮೂಲದ ಪ್ರವಾಸಿಗರನ್ನು ಒಂದುಗೂಡಿಸಿ ಜೋಕೆಟ್ಟೆಯ ಮತ್ತು ನೆರೆಯ ಪ್ರದೇಶದ ಬಡ, ನಿರ್ಗತಿಕ ಮತ್ತು ಆರ್ಥಿಕವಾಗಿ ಕೆಳಮಟ್ಟದ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿಕೊಂಡಿದೆ.
ಇಫ್ತಾರ್ ನಂತರ ನಡೆದ ಕಾರ್ಯಕ್ರಮದಲ್ಲಿ JAMWA ನಡೆಸುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಅತಿಥಿಗಳಿಗೆ ವಿವರಿಸಲಾಯಿತು. ಸದಸ್ಯ ರವೂಫ್ ಎನ್. ಎಂ. ಕಿರಾಹತ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. JAMWA ದ ಜೆದ್ದಾ ಘಟಕದ ಅಧ್ಯಕ್ಷ ರವೂಫ್ ಸ್ವಾಗತಿಸಿದರು. JAMWA ಜೆದ್ದಾ ಘಟಕದ ಸದಸ್ಯ ಇಂಜಿನಿಯರ್ ಅಬ್ದುರಹ್ಮಾನ್ ಖುರಾನ್ ಕಲಿಕೆಯ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಹನೀಫ್ ಹಾರಿಸ್ ಕಾರ್ಯಕ್ರಮ ನಿರೂಪಿಸಿದರು. ಹುಸೈನ್ ಅರಿಕೇರೆ ವಂದಿಸಿದರು.





