ಓಮ್ನಿ ಆ್ಯಂಬುಲೆನ್ಸ್‌ಗೆ ನಿಷೇಧ ಹಿನ್ನೆಲೆ: ಪುತ್ತೂರಿನ ಚಾಲಕರಿಂದ ಸರ್ಕಾರಕ್ಕೆ ಮನವಿ

ಪುತ್ತೂರು, ಜೂ.5: ಆ್ಯಂಬುಲೆನ್ಸ್ ಸೇವೆ ನೀಡುತ್ತಿರುವ ಮಾರುತಿ ಓಮ್ನಿ ವಾಹನದ ನೋಂದಣಿಯನ್ನು ರದ್ದು ಪಡಿಸದೆ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ವಾಹನಗಳಿಗೆ ಮುಂದಿನ ಅವಧಿಗೆ ಸೇವೆ ಸಲ್ಲಿಸಲು ಕಲಾವಕಾಶ ನೀಡಬೇಕೆಂದು ಆಗ್ರಹಿಸಿ ಪುತ್ತೂರಿನ ಆ್ಯಂಬುಲೆನ್ಸ್ ವಾಹನ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು ಸೋಮವಾರ ಪುತ್ತೂರು ಉಪ ವಿಭಾಗಾಧಿಕಾರಿಗಳ ಕಚೇರಿಯ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಪುತ್ತೂರಿನಲ್ಲಿ 20ಕ್ಕೂ ಅಧಿಕ ಮಾರುತಿ ಓಮ್ನಿಯಲ್ಲಿ ಕಳೆದ 20 ವರ್ಷಗಳಿಂದ ಆ್ಯಂಬುಲೆನ್ಸ್ ಸೇವೆ ನೀಡಲಾಗುತ್ತಿದ್ದು, ಈ ಭಾಗದ ಗುಡ್ಡಗಾಡುಗಳಿಂದ ಕೂಡಿರುವ ಗ್ರಾಮಿಣ ಪ್ರದೇಶಗಳ ಚಿಕ್ಕದಾದ ಮತ್ತು ವಾಹನ ಸಂಚಾರಕ್ಕೆ ಕಷ್ಟಕರವಾದ ರಸ್ತೆಗಳಲ್ಲಿ ಮಾರುತಿ ಓಮ್ನಿಯಲ್ಲಿ ಆ್ಯಂಬುಲೆನ್ಸ್ ಸೇವೆ ನೀಡಲು ಅನುಕೂಲಕರವಾಗಿರುತ್ತದೆ. ಅಲ್ಲದೆ ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಮವಿಯಲ್ಲಿ ತಿಳಿಸಲಾಗಿದೆ.
Next Story





