ಐವರಿ ಕೋಸ್ಟ್‌ನ ಮಾಜಿ ಫುಟ್ಬಾಲ್ ಆಟಗಾರ ಕುಸಿದು ಬಿದ್ದು ಸಾವು

ಲಂಡನ್,ಜೂ. 5:ಐವರಿ ಕೋಸ್ಟ್ ಫುಟ್ಬಾಲ್ ತಂಡದ ಮಾಜಿ ಮಿಡ್‌ಫೀಲ್ಡರ್ ಚೆಕ್ ಇಸ್ಮಾಯೀಲ್ ಟಿಯೊಟೆ ಚೀನ ತಂಡದ ಪರ ಆಡಲು ಅಭ್ಯಾಸ ನಡೆಸುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ನಾಲ್ಕು ತಿಂಗಳ ಹಿಂದೆ ಬೀಜಿಂಗ್ ಎಂಟರ್‌ಪ್ರೈಸಸ್ ತಂಡ ಸೇರಿದ್ದ ಚೆಕ್ ಟಿಯೊಟೆ ಅವರು ಅಭ್ಯಾಸ ನಡೆಸುತ್ತಿದ್ದ ವೇಳೆ ಮೈದಾನದಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.
30ರ ಹರೆಯದ ಟಿಯೊಟೆ ಬೀಜಿಂಗ್ ತಂಡದ ಪರ 11ಪಂದ್ಯಗಳಲ್ಲಿ ಆಡಿದ್ದರು. ನ್ಯೂಕಾಸ್ಟಲ್ ಯುನೈಟೆಡ್ ತಂಡದಲ್ಲಿ 2010ರಿಂದ 2017ರ ತನಕ 139 ಪಂದ್ಯಗಳನ್ನು ಆಡಿದ್ದರು.
ಐವರಿ ಕೋಸ್ಟ್ ರಾಷ್ಟ್ರೀಯ ತಂಡದಲ್ಲಿ 2009ರಿಂದ 2015ರ ತನಕ 52ಪಂದ್ಯಗಳನ್ನಾಡಿ 1 ಗೋಲು ಜಮೆ ಮಾಡಿದ್ದರು.
Next Story





