ಜೂ. 7: ಕೆರಿಯರ್ ಕೌನ್ಸೆಲಿಂಗ್, ಇಫ್ತಾರ್ ಕೂಟ

ಮಂಗಳೂರು, ಜೂ.6: ಅಂಬೇಡ್ಕರ್ ಫ್ರೆಂಡ್ಸ್ ಕ್ಲಬ್ ಜೆಪ್ಪು ಹಾಗೂ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್ ಐ ಓ) ಮಂಗಳೂರು ಶಾಖೆಯ ಸಹಯೋಗದಲ್ಲಿ ಜೂ.7 ರಂದು ಕೆರಿಯರ್ ಕೌನ್ಸೆಲಿಂಗ್ ಹಾಗೂ ಸೌಹಾರ್ದ ಇಫ್ತಾರ್ ಕೂಟ ಜೆಪ್ಪುವಿನಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಹಲವು ಧರ್ಮಗಳು: 'ಒಂದು ಭಾರತ' ಎಂಬ ಎಸ್ ಐ ಓ ನ ವಾರ್ಷಿಕ ಅಭಿಯಾನದ ಪ್ರಯುಕ್ತ ನಡೆಯುವ ಈ ಕಾರ್ಯಕ್ರಮದಲ್ಲಿ ದಲಿತ ಮುಖಂಡ ಅಶೋಕ್ ಕೊಂಚಾಡಿ, ಅಂಬೇಡ್ಕರ್ ಫ್ರೆಂಡ್ಸ್ ಕ್ಲಬ್ ಜೆಪ್ಪು ಇದರ ಅಧ್ಯಕ್ಷೆ ಶ್ವೇತಾ ಜೆಪ್ಪು, ಎಸ್ ಐ ಓ ದ.ಕ. ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್, ಎಸ್ ಐ ಓ ನಗರಾಧ್ಯಕ್ಷ ಅಹ್ಮದ್ ಮುಬೀನ್ ಬೆಂಗ್ರೆ ಭಾಗವಹಿಸಲಿದ್ದಾರೆ.
ಇದೇ ವೇಳೆ ವಿದ್ಯಾರ್ಥಿಗಳಿಗೆ ಡಾ. ಮಿಸ್ಹಬ್ ಬೆಂಗ್ರೆ ಕೆರಿಯರ್ ಕೌನ್ಸೆಲಿಂಗ್ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story