ನುಸುಳುವಿಕೆ ಯತ್ನಕ್ಕೆ ಸೇನೆಯ ಅಡ್ಡಗಾಲು, ಓರ್ವ ಉಗ್ರನ ಹತ್ಯೆ

ಶ್ರೀನಗರ,ಜೂ.7: ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಛಿಲ್ ವಿಭಾಗದ ನಿಯಂತ್ರಣ ರೇಖೆಯಲ್ಲಿ ಮಂಗಳವಾರ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ ಸೇನೆಯು ಓರ್ವ ಉಗ್ರನನ್ನು ಹತ್ಯೆಗೈದಿದೆ.
ಕತ್ತಲೆಯ ಮರೆಯಲ್ಲಿ ನಿಯಂತ್ರಣ ರೇಖೆಯೊಳಗೆ ನುಸುಳಲು ಯತ್ನಿಸುತ್ತಿದ್ದ ಶಸ್ತ್ರಾಸ್ತ್ರ ಸಜ್ಜಿತ ಉಗ್ರರ ಗುಂಪೊಂದನ್ನು ಗಮನಿಸಿದ ಕಾವಲು ನಿರತ ಯೋಧರು ದಟ್ಟ ಅರಣ್ಯ ದೊಳಗೆ ಪರಾರಿಯಾಗಲು ಯತ್ನಿಸುತ್ತಿದ್ದ ಅವರ ಮೇಲೆ ಗುಂಡು ಹಾರಿಸಿದ್ದರು.ಓರ್ವ ಉಗ್ರ ಮೃತಪಟ್ಟಿದ್ದು, ಇತರ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಇದು ಉತ್ತರ ಕಾಶ್ಮೀರದಲ್ಲಿ ಸೇನೆಯು ಕಳೆದ ಎರಡು ವಾರಗಳಲ್ಲಿ ವಿಫಲಗೊಳಿಸಿರುವ ಮೂರನೇ ನುಸುಳುವಿಕೆ ಯತ್ನವಾಗಿದೆ.
Next Story





