ಸುದ್ದಿಗೋಷ್ಠಿಯಲ್ಲಿ ಯೆಚೂರಿಯನ್ನು ತಳ್ಳಾಡಿದ ಪ್ರತಿಭಟನಾಕಾರ

ಹೊಸದಿಲ್ಲಿ,ಜೂ.7: ಬುಧವಾರ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಯೊಂದರಲ್ಲಿ ಪ್ರತಿಭಟನಾಕಾರನೋರ್ವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರನ್ನು ತಳ್ಳಾಡಿದ ಘಟನೆ ನಡೆದಿರುವುದು ವರದಿಯಾಗಿದೆ.ಈ ಘಟನೆಯಲ್ಲಿ ಯೆಚೂರಿಯವರು ಗಾಯಗೊಳ್ಳದೆ ಪಾರಾಗಿದ್ದಾರೆ. ಸುದ್ದಿಗೋಷ್ಠಿ ಯಲ್ಲಿ ಸಿಪಿಎಂ ವಿರುದ್ಧ ಘೋಷಣೆಗಳನ್ನೂ ಕೂಗಲಾಗಿತ್ತು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
''ನಮ್ಮ ಧ್ವನಿಯನ್ನಡಗಿಸಲು ಸಂಘದ ಗೂಂಡಾಗರ್ದಿ ಯತ್ನಗಳಿಗೆ ನಾವು ಮಣಿಯುವು ದಿಲ್ಲ. ಇದು ಭಾರತದ ಅಂತರಾತ್ಮಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದ್ದು, ಗೆಲುವು ನಮ್ಮದೇ''ಎಂದು ಘಟನೆಯ ಬಳಿಕ ಯೆಚೂರಿ ಟ್ವೀಟಿಸಿದ್ದಾರೆ.
ಪ್ರತಿಭಟನಾಕಾರ ಯಾವ ಸಂಘಟನೆಗೆ ಸೇರಿದವನು ಎನ್ನುವುದು ಸ್ಪಷ್ಟವಾಗಿಲ್ಲ. ಆತ ಯಾವ ಕಾರಣಕ್ಕಾಗಿ ಪ್ರತಿಭಟಿಸಿದ್ದ ಎನ್ನುವುದೂ ಗೊತ್ತಾಗಿಲ್ಲ. ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಘಟನೆಯನ್ನು ಖಂಡಿಸಿದ್ದಾರೆ.
Next Story





