ಅಮೆರಿಕದ ಬಾಂಬರ್ ವಿಮಾನವನ್ನು ತಡೆದ ರಶ್ಯ ವಿಮಾನ

ವಾಶಿಂಗ್ಟನ್, ಜೂ. 7: ಅಮೆರಿಕದ ಬಿ-52 ಬಾಂಬರ್ ವಿಮಾನವನ್ನು ತಡೆಯಲು ರಶ್ಯ ಮಂಗಳವಾರ ಸುಖೋಯ್ ಎಸ್‌ಯು-27 ವಿಮಾನವನ್ನು ನಿಯೋಜಿಸಿದ ಘಟನೆ ವರದಿಯಾಗಿದೆ. ಅಮೆರಿಕದ ವಿಮಾನವು ಬಾಲ್ಟಿಕ್ ಸಮುದ್ರದ ಮೇಲೆ ತನ್ನ ಗಡಿಗೆ ಸಮೀಪದಲ್ಲಿ ಹಾರುತ್ತಿತ್ತು ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.
ಮಾಸ್ಕೊ ಸಮಯ ಬೆಳಗ್ಗೆ ಸುಮಾರು 10 ಗಂಟೆಗೆ ಅಮೆರಿಕದ ವಿಮಾನವು ರಶ್ಯ ಗಡಿಗೆ ಸಮಾನಾಂತರವಾಗಿರುವ ತಟಸ್ಥ ಜಲಪ್ರದೇಶದ ಮೇಲೆ ಹಾರುತ್ತಿದ್ದಾಗ ರಶ್ಯದ ವಾಯು ರಕ್ಷಣಾ ವ್ಯವಸ್ಥೆಯು ಅದನ್ನು ಗುರುತಿಸಿತು ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿತು.
‘‘ರಶ್ಯದ ಎಸ್‌ಯು-27 ವಿಮಾನವು ಅಮೆರಿಕದ ವಿಮಾನದಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿತು ಹಾಗೂ ಆ ವಿಮಾನವನ್ನು ಬಿ-52 ಬಾಂಬರ್ ಎಂಬುದಾಗಿ ಗುರುತಿಸಿತು. ಅಮೆರಿಕದ ವಿಮಾನವು ತನ್ನ ಪಥವನ್ನು ಬದಲಿಸಿ ಗಡಿ ಪ್ರದೇಶದಿಂದ ದೂರ ಹೋಗುವವರೆಗೂ ಅದನ್ನು ಹಿಂಬಾಲಿಸಿತು’’ ಎಂದು ರಶ್ಯ ಸಚಿವಾಲಯ ಹೇಳಿದೆ.
Next Story





