ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 18 ಮಂದಿ ಮೃತ್ಯು

ಭೋಪಾಲ್, ಜೂ.7: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 18 ಮಂದಿ ಮೃತಪಟ್ಟ ಘಟನೆ ಭೋಪಾಲ್ ನಿಂದ 440 ಕಿ.ಮೀ. ದೂರದ ಬಾಲಘಾಟ್ ನಲ್ಲಿ ನಡೆದಿದೆ.
ಬೆಂಕಿ ಬಿದ್ದ ಪರಿಣಾಮ ಪಟಾಕಿಗಳು ಸುಮಾರು 2 ಗಂಟೆಗಳ ಕಾಲ ಸ್ಫೋಟಗೊಂಡಿತ್ತು ಎನ್ನಲಾಗಿದೆ.
ಭಾರೀ ತೀವ್ರತೆಯ ಸ್ಫೋಟ ಇದಾಗಿದ್ದು, ಸ್ಫೋಟದ ತೀವ್ರತೆಗೆ ಕಾರ್ಖಾನೆ ಧ್ವಂಸವಾಗಿದೆ. ಘಟನಾ ಸ್ಥಳದಿಂದ 18 ಮೃತದೇಹಗಳನ್ನು ಹೊರತೆಗೆಯಲಾಗಿದೆ, ಅವಶೇಷಗಳಡಿ ಹಲವು ಸಿಲುಕಿರುವ ಸಾಧ್ಯತೆಗಳಿವೆ ಎಂದು ಎಡಿಜಿಪಿ ಜನಾರ್ದನ್ ಹೇಳಿದ್ದಾರೆ,
ಘಟನಾಸ್ಥಳದಲ್ಲಿ ಹಲವು ಕಾರ್ಮಿಕರಿದ್ದು, ಸ್ಫೋಟದ ಸಂದರ್ಭ ಪಾರಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ,.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 2 ಲಕ್ಷ ರೂ. ಘೋಷಿಸಿದ್ದಾರೆ.
Next Story





