ಪಠ್ಯಪುಸ್ತಕ ಶುಲ್ಕ ಪಾವತಿ ಬೇಡ
ಉಡುಪಿ, ಜೂ.7: ರಾಜ್ಯ ಪಠ್ಯ ಕಾರ್ಯಕ್ರಮದಡಿ ಅನುಮತಿ ಪಡೆದು ಶಾಲೆಗಳನ್ನು ನಡೆಸುತ್ತಿರುವ 78 ಅನುದಾನ ರಹಿತ ಶಾಲೆಗಳಲ್ಲಿ ಆರ್‌ಟಿಇ ಅಡಿಯಲ್ಲಿ ಪ್ರಸ್ತುತ ವರ್ಷ ಹಾಗೂ ಈ ಹಿಂದಿನ ಸಾಲಿನಲ್ಲಿ ದಾಖಲಾದ ವಿದ್ಯಾರ್ಥಿಗಳ ಹೆತ್ತವರು ತಮ್ಮ ಮಕ್ಕಳ ಪಠ್ಯಪುಸ್ತಕ ಶುಲ್ಕವನ್ನು ಪಾವತಿಸ ಬೇಕಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಈ ಪುಸ್ತಕಗಳನ್ನು ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘದ ವತಿಯಿಂದ ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಪಠ್ಯಪುಸ್ತಕಕ್ಕಾಗಿ ಹಣ ವಸೂಲಾತಿ ಮಾಡಿದ ಶಾಲೆಗಳಿದ್ದಲ್ಲಿ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಬಹುದಾಗಿದೆ ಎಂದು ಡಿಡಿಪಿಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.