ಪೋಡಿ ಮುಕ್ತ ಗ್ರಾಮಗಳ ಅರ್ಜಿ ಸ್ವೀಕರಿಸಲು ಸೂಚನೆ: ಕಾಗೋಡು ತಿಮ್ಮಪ್ಪ
.jpg)
ಬೆಂಗಳೂರು, ಜೂ.7: ಪೋಡಿ ಮುಕ್ತ ಗ್ರಾಮ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗಳು ಹೊಸ ಅರ್ಜಿಗಳನ್ನು ನೀಡಿದರೆ ಸ್ವೀಕರಿಸುವಂತೆ ಸೂಚನೆ ನೀಡಿದ್ದೇನೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಬುಧವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಪಕ್ಷೇತರ ಸದಸ್ಯ ಬಸನಗೌಡ ಆರ್.ಪಾಟೀಲ್ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ತಾಲೂಕು ತಹಶೀಲ್ದಾರ್‌ಗಳು ಪೋಡಿ ಮುಕ್ತ ಗ್ರಾಮ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಹಳೆಯ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡುತ್ತಿದ್ದಾರೆ. ಹೀಗಾಗಿ, ತಹಶೀಲ್ದಾರ್ ಅವರಿಗೆ ಹೊಸ ಅರ್ಜಿಗಳನ್ನೂ ಸ್ವೀಕರಿಸಿ ವಿಲೇವಾರಿ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
Next Story





