ಪರ್ಕಳ ಅಬೂಬಕ್ಕರ್‌ಗೆ ಆರ್ಯಭಟ ಪ್ರಶಸ್ತಿ

ಉಡುಪಿ, ಜೂ.7: ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ವತಿ ಯಿಂದ ಸಮಾಜ ಸೇವಕ, ಪರ್ಕಳ ದೇವಿನಗರ ಬಳಕೆದಾರರ ವೇದಿಕೆಯ ಆಜೀವ ಗೌರವ ಅಧ್ಯಕ್ಷ ಹಾಜಿ ಕೆ.ಅಬೂಬಕ್ಕರ್ ಅವರಿಗೆ ಆರ್ಯಭಟ ಅಂತ ರಾಷ್ಟ್ರೀಯ ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದಾನ ಮಾಡಲಾಯಿತು.
ಸುಪ್ರಿಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ, ದೂರ ದರ್ಶನ ಹೆಚ್ಚುವರಿ ಮಹಾನಿರ್ದೇಶಕ ಡಾ.ಮಹೇಶ ಜೋಶಿ, ಚಿತ್ರ ನಿರ್ಮಾಪಕ ಸಾಯಿಪ್ರಕಾಶ್, ಆರ್ಯಭಟ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ.ಎಚ್.ಎಲ್ .ಎನ್ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story





