ನಿಧನ : ಪೊಂಕು ಸಾಲ್ಯಾನ್

ಕಾಪು, ಜೂ.7: ಕಾಪು ಕೈಪುಂಜಾಲು ಬಾವು ಮನೆ ನಿವಾಸಿ ಕೃಷಿಕ ಪೊಂಕು ಸಾಲ್ಯಾನ್ (88) ಮಲ್ಪೆಯ ತಮ್ಮ ಮಗಳ ಮನೆಯಲ್ಲಿ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.
ಮೃತರು ಪತ್ನಿ, ನಾಲ್ವರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮೃತರು ಉತ್ತಮ ಕೃಷಿಕರಾಗಿದ್ದು, ಅಂದಿನ ಕಾಲದಲ್ಲಿ ಆಲಿಬೆಲ್ಲ(ಗಾಣ) ತಯಾರಿಕಾ ಘಟಕವನ್ನು ತಮ್ಮ ಮನೆ ಆವರಣದಲ್ಲಿ ನಿರ್ಮಿಸಿ ಬೆಲ್ಲ ತಯಾರಿಸಿ ಜಪ್ರಿಯರಾಗಿದ್ದರು.
Next Story





