ನೂತನ ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ರೇ

ವಾಶಿಂಗ್ಟನ್, ಜೂ. 7: ವಕೀಲ ಹಾಗೂ ಕಾನೂನು ಇಲಾಖೆಯ ಮಾಜಿ ಅಧಿಕಾರಿ ಕ್ರಿಸ್ಟೋಫರ್ ರೇ ಅವರನ್ನು ನೂತನ ಎಫ್‌ಬಿಐ ನಿರ್ದೇಶಕರಾಗಿ ನೇಮಿಸಲು ಉದ್ದೇಶಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ.
ಹಿಂದಿನ ಎಫ್‌ಬಿಐ ನಿರ್ದೇಶಕ ಜೇಮ್ಸ್ ಕಾಮಿ ಅವರನ್ನು ಟ್ರಂಪ್ ಉಚ್ಚಾಟಿಸಿದ ಬಳಿಕ ಈ ಹುದ್ದೆ ತೆರವಾಗಿತ್ತು.
Next Story





