ಯೆಚೂರಿ ಮೇಲೆ ದಾಳಿಗೆ ಯತ್ನ: ಇಂದು ಪ್ರತಿಭಟನೆ

ಉಡುಪಿ, ಜೂ.7: ಪಾಲಿಟ್ ಬ್ಯೂರೋ ಸಭೆಯ ನಂತರ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ದೆಹಲಿಯ ಕೇಂದ್ರ ಸಮಿತಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಆರ್‌ಎಸ್‌ಎಸ್ ಕಾರ್ಯಕರ್ತರಿಬ್ಬರು ದಾಳಿ ನಡೆಸಲು ಪ್ರಯತ್ನಿಸಿರುವುದನ್ನು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಇಂದು ರಾಷ್ಟ್ರಪತಿ ಚುನಾವಣೆಯಲ್ಲಿ ಎಲ್ಲಾ ಜಾತ್ಯಾತೀತ ರಾಜಕೀಯ ಪಕ್ಷ ಗಳಲ್ಲಿ ಒಮ್ಮತ ಮೂಡಿಸಲು ಯೆಚೂರಿ ಪ್ರಯತ್ನಿಸುತ್ತಿದ್ದರು. ಆದ್ದರಿಂದಲೇ ಆರ್‌ಎಸ್‌ಎಸ್‌ಗೆ ಸಿಪಿಎಂ ಮುಖಂಡರೆಂದರೆ ಕಣ್ಣುರಿ. ಇಂತಹ ಬೆದರಿಕೆಗಳಿಗೆ ಪಕ್ಷ ಬಗ್ಗುವುದಿಲ್ಲ ಎಂದು ಹೇಳಿರುವ ಸಿಪಿಎಂ, ದಾಳಿ ಯತ್ನದ ವಿರುದ್ಧ ಜೂ.8ರಂದು ಸಂಜೆ 4ಗಂಟೆಗೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.
Next Story





