ಜೂಜಾಟ: ಐವರ ಬಂಧನ
ಕಡೂರು, ಜೂ.7: ತಾಲೂಕಿನ ಮಲ್ಲೇಶ್ವರ ಗ್ರಾಮದ ಕೆರೆಯಂಗಳದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಐವರು ಆರೋಪಿಗಳನ್ನು ಬುಧವಾರ ಪೊಲೀಸರು ಬಂಧಿಸುವ ಮೂಲಕ ಪ್ರಕರಣ ದಾಖಲಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಮಲ್ಲೇಶ್ವರ ಗ್ರಾಮದ ಕೆರೆಯಂಗಳದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಆರೋಪಿ ಗಿರೀಶ್ ಸೇರಿದಂತೆ ಕಡೂರು ಟೌನ್ ವಾಸಿಗಳಾದ 5 ಜನ ಆರೋಪಿಗಳನ್ನು ಕಡೂರು ಪೊಲೀಸರು ಬಂಧಿಸಿ, ಸ್ಥಳದಲ್ಲಿದ್ದ ಇಸ್ಪೀಟ್ ಎಲೆಗಳು ಮತ್ತು 6,450 ರೂ. ಹಣವನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Next Story





