ಮಹಿಳೆ ನಾಪತ್ತೆ

ಮೂಡುಬಿದಿರೆ, ಜೂ.7: ತಾಕೋಡೆ ಕರಿಂಜೆ ನಿವಾಸಿ ಲೂಯಿಸ್ ಲೋಬೊ ಅವರ ಪತ್ನಿ ಎಮಿಲ್ಡಾ ಲೋಬೊ (53) ಮಂಗಳವಾರ ಬೆಳಗ್ಗಿನಿಂದ ಕಾಣೆಯಾಗಿರುವುದಾಗಿ ಅವರ ಪುತ್ರ ಜೇಸನ್ ಕಿಶನ್ ಲೋಬೊ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.
ಜೇಸನ್ ಬೆಳಗ್ಗೆ 8 ಗಂಟೆಯ ಸುಮಾರಿಗೆ ಡೈರಿಗೆ ಹಾಲು ಕೊಟ್ಟು ಮರಳಿ ಮನೆಗೆ ಬಂದಾಗ ತಾಯಿ ನಾಪತ್ತೆಯಾಗಿ ರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಐದು ಅಡಿ ಎತ್ತರ, ಗೋಧಿ ಮೈಬಣ್ಣದ ಎಮಿಲ್ಡಾ ಅವರು ಬಲಗಣ್ಣಿನ ಕೆಳಗಡೆ ಕಪ್ಪು ಮಚ್ಚೆ ಹೊಂದಿದ್ದು ಕನ್ನಡ, ಕೊಂಕಣಿ, ತುಳು ಭಾಷೆ ಬಲ್ಲವರಾಗಿದ್ದಾರೆ.
ಇವರ ಇರುವಿಕೆಯ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಅಥವಾ ಪತ್ತೆಯಾದಲ್ಲಿ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಅಥವಾ ಮೂಡುಬಿದಿರೆ ಠಾಣೆಗೆ ಮಾಹಿತಿ ನೀಡಿ ಸಹಕರಿಸುವಂತೆ ಕೋರಲಾಗಿದೆ.
Next Story





