ಜೂ. 9: ದುಬೈಯಲ್ಲಿ 'ದಾರುನ್ನೂರ್ ಗ್ರಾಂಡ್ ಇಫ್ತಾರ್ – 2017'
ದುಬೈ, ಜೂ.7: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಮೂಡಬಿದ್ರೆ ಇದರ ಅಧೀನದಲ್ಲಿ ಯುಎಇ ಯಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ಕಲ್ಚರಲ್ ಸೆಂಟರ್ ಯುಎಇ ಇದರ ವತಿಯಿಂದ ಗ್ರಾಂಡ್ ಇಫ್ತಾರ್ – 2017 ಕಾರ್ಯಕ್ರಮವು ಜೂ.9ರಂದು ಬರ್ ದುಬೈ ಅಲ್ ಮಂಕೂಲ್ ನಲ್ಲಿರುವ ಗ್ರಾಂಡ್ ಅಕ್ಸೆಲ್ಸಿಯರ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.
ಸಂಜೆ 5 ಗಂಟೆಗೆ ಸರಿಯಾಗಿ ಉಸ್ತಾದ್ ಅಬ್ದುಲ್ ಖಾದರ್ ಅಸ್ ಅದಿ ನೇತೃತ್ವದಲ್ಲಿ ಮಜ್ಲಿಸುನ್ನೂರ್ ನಡೆಯಲಿದೆ. ಕಾರ್ಯಕ್ರಮದ ಅದ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿಯೂ, ದಾರುನ್ನೂರ್ ಇದರ ನಾಯಕ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ ಹರಿ ಭಾಗವಹಿಸಲಿದ್ದಾರೆ.
ದುಆ ಕಾರ್ಯವನ್ನು ದುಬೈ ಹೋಲಿ ಕುರಾನ್ ಅವಾರ್ಡ್ ಇದರ ಮುಖ್ಯ ಅತಿಥಿ ಸಮಸ್ತ ಕೇರಳ ಜಮ್ಮಿಯ್ಯತುಲ್ ಉಲಮಾ ಇದರ ಅದ್ಯಕ್ಷ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯಾ ತಂಗಳ್ ನೆರವೇರಿಸಲಿದ್ದಾರೆ. ದುಬೈ ಸುನ್ನಿ ಸೆಂಟರ್ ಇದರ ಅದ್ಯಕ್ಷರಾದ ಅಸ್ಸಯ್ಯದ್ ಹಾಮಿದ್ ಕೋಯಮ್ಮ ತಂಙಳ್ ಉಪಸ್ಥಿತಿ ಇರುವರು.
ದಾರುನ್ನೂರ್ ಕೇಂದ್ರ ಸಮಿತಿ ಇದರ ಡೈರೆಕ್ಟರ್ ಆಗಿರುವ ಅಲ್ ಹಾಜ್ ಕೆ.ಯಸ್. ಮಹಮ್ಮದ್ ಮಸೂದ್ (ಎಕ್ಸ್ ಯಂಯಲ್ ಸಿ ) ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ದಾರುನ್ನೂರ್ ಗ್ರಾಂಡ್ ಇಫ್ತಾರ್ – 2017 ಇದರ ಚೇರ್ಮೇನ್ ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್ ಸ್ವಾಗತ ಭಾಷಣ ಗೆಯ್ಯಲಿದ್ದಾರೆ, ಅಂತಾರಾಷ್ಟ್ರೀಯ ವಾಗ್ಮಿ ಉಸ್ತಾದ್ ಸಿಂಸಾರುಲ್ ಹಕ್ ಹುದವಿ ಪ್ರವಚನ ನೀಡಲಿದ್ದಾರೆ.
ಗೌರವ ಅತಿಥಿಗಳಾಗಿ ಮಸ್ಜಿದ್ ಬಹ್ರ್ ಅನ್ನೂರ್ ಇದರ ಶೈಖ್ ಅಬ್ದುಲ್ ಬಾರಿ ಅಬೂಬಕ್ಕರ್ ಆಲ್ ಝುಬೈದಿ, ಮತ್ತು ಶೈಖ್ ಅಹ್ಮದ್ ಅಬ್ದುಲ್ ಬಾರಿ ಅಬೂಬಕ್ಕರ್ ಅಲ್ ಝುಬೈದಿ ಯವರು ಆಗಮಿಸಲಿದ್ದಾರೆ.
ಅದೇ ರೀತಿ ಮುಖ್ಯ ಅತಿಥಿಗಳಾಗಿ ದಾರುನ್ನೂರ್ ವನಿತಾ ವಿದ್ಯಾಲಯದ ನಿಸಾರ್ ಅಹ್ಮದ್ ಕೆ.ಯಸ್, ಹಿದಾಯತುಲ್ಲಾ ಅಬ್ಬಾಸ್ , ಝಕರಿಯಾ ಅಹ್ಮದ್ , ಶಮ್ಮೂನ್ ನಿಸಾರ್ ಅಹ್ಮದ್, ಮತೀನ್ ಅಹ್ಮದ್ ಚಿಮ್ಲೀ ಮಂಗಳೂರು , ಮಹಮ್ಮದ್ ಆಸಿಫ್ ಮಸೂದ್, ಅಬ್ದುಲ್ ಖಾದರ್ ಹಾಜಿ ಅಂಚಿನಡ್ಕ, ಸಯ್ಯದ್ ಆಸ್ಕರ್ ಅಲಿ ತಂಗಳ್ ಕೋಲ್ಪೆ, ಹಾಜಿ ಮುಹಿಯುದ್ದೀನ್ ಕುಟ್ಟಿ ಕಕ್ಕಿಂಜೆ, ಅಬ್ದುಲ್ಲಾ ಹಾಜಿ ಮದುಮೂಲೆ, ಬಶೀರ್ ಬಂಟ್ವಾಳ್ , ಉಸ್ತಾದ್ ಶೌಖತ್ ಅಲಿ ಹುದವಿ, ಯೂಸುಫ್ ಅಲ್ ಫಲಾಹ್ , ಇಕ್ಬಾಲ್ ಬಾವ ಬಂಟ್ವಾಳ್ , ಫಾರಿಸ್ ಝಕರಿಯಾ ಅಹ್ಮದ್, ಸಂಶುದ್ದೀನ್ ಕಲ್ಕಾರ್, ಸಲೀಂ ಅಲ್ತಾಫ್ ಕುದ್ರೋಲಿ, ಆಶ್ರಫ್ ಖಾನ್ ಮಾಂತೂರ್ , ಮಹಮ್ಮದ್ ಅಲಿ ಉಚ್ಚಿಲ್ , ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯ , ಸಂಶುದ್ದೀನ್ ವಳಪಟ್ಟಣಂ, ಮೊಹ್ಸಿನ್ ಅಹ್ಮದ್ ಮೂಡಬಿದ್ರಿ, ಇಬ್ರಾಹಿಂ ಖಲೀಲ್ ಅರಿಮಳ, ಮಹಮ್ಮದ್ ಆಶ್ರಫ್ ಬಾಳೆ ಹೊನ್ನೂರ್, ಇಸ್ಮಾಯಿಲ್ ಮನ್ಸೂರ್, ಅಬ್ದುಲ್ ಖಾದರ್ ಬೈತಡ್ಕ, ಮಹಮ್ಮದ್ ಶರೀಫ್ ಕಾವು, ಮುಸ್ತಾಫಾ ಯಸ್. ಯಂ ಮೊದಲಾದವರು ಆಗಮಿಸಲಿದ್ದಾರೆ.
ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಮತ್ತು ನಮಾಝ್ ಗೆ ವಿಶಾಲವಾದ ಸ್ಥಳಾವಕಾಶವಿದ್ದು ರಾತ್ರಿ 8.15 ಕ್ಕೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದು ದಾರುನ್ನೂರ್ ಯು ಎ ಇ ಅದ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ, ಗ್ರಾಂಡ್ ಇಫ್ತಾರ್ ಚೇರ್ಮೆನ್ ಮಹಮ್ಮದ್ ರಫೀಕ್ ಸುರತ್ಕಲ್ , ಗ್ರಾಂಡ್ ಇಫ್ತಾರ್ ಕಾರ್ಯದರ್ಶಿ ನವಾಝ್ ಬಿ.ಸಿ ರೋಡ್ ಕೋಶಾಧಿಕಾರಿ ಸುಲೈಮಾನ್ ಮುಸ್ಲಿಯಾರ್ ಕಲ್ಲೆಗ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.