ಪತ್ರಕರ್ತರರಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿಧನರಾದ ಎನ್.ನಾಗರಾಜುಗೆ ಶ್ರದ್ದಾಂಜಲಿ ಅರ್ಪಣೆ

ಗುಂಡ್ಲುಪೇಟೆ: ಪತ್ರಕರ್ತರರಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿಧನರಾದ ದಿವಂಗತ ಎನ್.ನಾಗರಾಜು ರವರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶ್ರದ್ದಾಂಜಲಿ ಅರ್ಪಿಸಲಾಯಿತು.
ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಸಭೆಯಲ್ಲಿ ನೆರೆದಿದ್ದ ಪತ್ರಕರ್ತರು ದಿವಂಗತರಿಗೆ ಎರಡು ನಿಮಿಷ ಮೌನಾಚರಣೆ ನಡೆಸಿದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾ. ಬಾಬು ಮಾತನಾಡಿ, ಸಮಾಜದಲ್ಲಿ ಪತ್ರಕರ್ತರ ಸೇವೆ ಅಮೂಲ್ಯವಾದುದಾಗಿರುತ್ತದೆ.ಸಮಾಜದಲ್ಲಿನ ಅನೇಕ ಅಂಕು ಡೊಂಕುಗಳನ್ನು ತಿದ್ದುತ್ತಾ, ಅದೇ ಸಮಯದಲ್ಲಿ ಸರ್ಕಾರದ ಸಾಧನೆ ಲೋಪದೋಷಗಳನ್ನು ಎತ್ತಿಹಿಡಿಯುತ್ತಾ ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಾರೆ.
ಪತ್ರಕರ್ತರಿಗೆ ಯಾವುದೇ ಭದ್ರತೆ ಇರುವುದಿಲ್ಲ. ಇಂತಹ ಸಮಯದಲ್ಲಿ ನಿಧನರಾದ ನಾಗರಾಜುರವರ ಅಕಾಲಿಕ ನಿಧನ ಪತ್ರಕರ್ತರಿಗೆ ತುಂಬಲಾರದ ನಷ್ಟ ಉಂಟಾಗಿದೆಎಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯ ಸದಸ್ಯರಾದ ಹಿರಿಯ ಪತ್ರಕರ್ತ ಸುಬ್ಬುರಾವ್ ಮಾತನಾಡಿ, ನಾಗರಾಜುರವರುತಮ್ಮಜೀವನವನ್ನು ಪತ್ರಿಕೋದ್ಯಮಕ್ಕೆ ಮುಡುಪಾಗಿಟ್ಟಿದ್ದರು. ಪ್ರಾಮಾಣಿಕ ಸೇವೆ ಸಲ್ಲಿಸಿ ಉತ್ತಮ ಸೇವೆ ಕೈಗೊಂಡು ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಇಂತಹಕುಟುಂಬಕ್ಕೆ ಪತ್ರಕರ್ತ ಮಿತ್ರರು ಸಹಾಯ ಹಸ್ತಚಾಚುವಂತೆ ಸಲಹೆ ನೀಡಿದರು.







