ಎಚ್ಚರದಲ್ಲಿರಲು ಕತರ್ ಭಾರತೀಯರಿಗೆ ಸೂಚನೆ
ಅರಬ್ ರಾಜತಾಂತ್ರಿಕ ಬಿಕ್ಕಟ್ಟು

ದುಬೈ, ಜೂ. 8: ಹಲವು ಅರಬ್ ದೇಶಗಳು ಕತರ್‌ನೊಂದಿಗಿನ ಸಂಬಂಧಗಳನ್ನು ಕಡಿದುಕೊಂಡಿರುವ ಹಿನ್ನೆಲೆಯಲ್ಲಿ, ಎಚ್ಚರದಿಂದಿರುವಂತೆ ಹಾಗೂ ಪ್ರಯಾಣ ಯೋಜನೆಗಳನ್ನು ಮಾರ್ಪಡಿಸುವಂತೆ ಭಾರತ ಕತರ್‌ನಲ್ಲಿರುವ ತನ್ನ ಪ್ರಜೆಗಳಿಗೆ ಸೂಚಿಸಿದೆ.
ಹಲವು ಅರಬ್ ದೇಶಗಳು ಕತರ್ ಜೊತೆಗಿನ ವಾಯುಯಾನ ಸಂಪರ್ಕವನ್ನು ಕಡಿದುಕೊಂಡಿರುವ ಹಿನ್ನೆಲೆಯಲ್ಲಿ ಆ ದೇಶದ ಜನರ ಪ್ರಯಾಣದಲ್ಲಿ ಏರುಪೇರಾಗಿದೆ.
ಹಾಗಾಗಿ, ಪ್ರಯಾಣ ಯೋಜನೆಯಲ್ಲಿ ಮಾರ್ಪಾಡು ತರುವುದಕ್ಕಾಗಿ ಸಲಹೆ ಕೋರಲು ತಮ್ಮ ಪ್ರಯಾಣ ಸಂಘಟಕರನ್ನು ಸಂಪರ್ಕಿಸುವಂತೆ ಕತರ್‌ನಲ್ಲಿರುವ ಭಾರತೀಯರಿಗೆ ಮನವಿ ಮಾಡಲಾಗಿದೆ ಎಂದು ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story





