ಕಾವೇರಿ ಗ್ರಾಮೀಣ ಬ್ಯಾಂಕ್‌ನಿಂದ ರೂ.2382 ಕೋಟಿ ವ್ಯವಹಾರ
ಅಭಿವೃದ್ಧಿ
ತುಮಕೂರು,ಜೂ.8:ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು ಶಾಖೆಗಳನ್ನು ಹೊಂದಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ತುಮಕೂರು ಜಿಲ್ಲೆಯಲ್ಲಿ ಒಟ್ಟು 76 ಶಾಖೆಗಳನ್ನು ಹೊಂದಿದ್ದು, ವಾರ್ಷಿಕ ರೂ.2382 ಕೋಟಿಗಳ ವ್ಯವಹಾರವನ್ನು ಹೊಂದಿದೆ ಎಂದು ಕಾವೇರಿ ಗ್ರಾಮೀಣಾಭಿವೃದ್ದಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಕೆ.ಸಿ.ಸೋಮಯಾಜಿ ತಿಳಿಸಿದ್ದಾರೆ.
ತುಮಕೂರು,ಪ್ರಶಾಂತ ನಗರ ದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್‌ನ 503ನೇ ಶಾಖೆ ಆರಂೋತ್ಸವದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ತುಮಕೂರು ಜಿಲ್ಲೆಯಲ್ಲಿ ಬ್ಯಾಂಕು 9.31 ಲಕ್ಷ ಗ್ರಾಹಕರನ್ನು ಹೊಂದಿದ್ದು, ರೂ.1078 ಕೋಟಿ ಠೇವಣಿ ಹಾಗೂ ರೂ.1304 ಕೋಟಿಗಳ ಸಾಲ,
ಮುಂಗಡಗಳೊಂದಿಗೆ ಒಟ್ಟು ರೂ.2382 ಕೋಟಿಗಳ ವ್ಯವಹಾರ ನಡೆಸಿದೆ ಎಂದು ಅವರು ತಿಳಿಸಿದರು.
ಬ್ಯಾಂಕಿನ ತುಮಕೂರು ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಶಂಕರ್ ಎಂ.ಕನವಳ್ಳಿ ಮಾತನಾಡಿ, ಕಳೆದ ವಿತ್ತೀಯ ವರ್ಷದಲ್ಲಿ ತುಮಕೂರು ಜಿಲ್ಲೆಯಲ್ಲಿ ಒಟ್ಟು ರೂ.576 ಕೋ. ಸಾಲ ವಿತರಿಸಿದ್ದು,ಆದ್ಯತಾವಲಯಕ್ಕೆ ರೂ.530 ಕೋ. ಸಾಲ ವಿತರಿಸಿದೆ. ಕಾವೇರಿ ಗ್ರಾಮೀಣ ಬ್ಯಾಂಕ್ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚಿನ ವಹಿವಾಟನ್ನು ಹೊಂದಿದ್ದು,ರೈತರಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ವ್ಯವಹರಿಸುತ್ತಿದ್ದು,ತುಮಕೂರು ಜಿಲ್ಲೆಯಲ್ಲಿ ಕೃಷಿ ವಲಯಕ್ಕೆ ರೂ.358 ಕೋಟಿಗಳಷ್ಟು ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ರೂ.271 ಕೋಟಿಗಳ ಸಾಲ ವಿತರಿಸಿದೆ ಎಂದು ಅವರು ತಿಳಿಸಿದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಕಳೆದ ವರ್ಷ ರೂ.86 ಕೋಟಿ ಹಾಗೂ ಜಂಟಿ ಬಾದ್ಯತಾ ಗುಂಪುಗಳಿಗೆ ರೂ.12 ಕೋಟಿ ಸಾಲ ವಿತರಿಸಿರುವುದಾಗಿ ತಿಳಿಸಿದ ಶಂಕರ್ ಎಂ. ಕನವಳ್ಳಿ ಸಾಮಾಜಿಕ ನ್ಯಾಯ ಒದಗಿಸುವ ದಿಸೆಯಲ್ಲಿ ಬ್ಯಾಂಕು ಕಳೆದ ವರ್ಷ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ,ಪಂಗಡಗಳವರಿಗೆ ಒಟ್ಟು ರೂ.103 ಕೋಟಿಗಳಷ್ಟು ಸಾಲ ವಿತರಿಸಲಾಗಿದೆ ಎಂದರು.
ಸಮಾರಂಭದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಭುವನಹಳ್ಳಿ ನಾಗರಾಜ್,ಹಿರಿಯ ವ್ಯವಸ್ಥಾಪಕರಾದ ಗೋಪಾಲ್ ಟಿ. ಹೆಗಡೆ, ಜಿ.ಆರ್.ದಾಸ್, ಬಿ.ಸಿ. ಶಿವಕುಮಾರ್, ರಾಜಶೇಖರ್, ಎಲ್. ಶ್ರೀನಿವಾಸ್, ನೂತನ ಶಾಖೆ ವ್ಯವಸ್ಥಾಪಕರಾದ ಸಂತೋಷ್ ಮುಂತಾದವರು ಹಾಜರಿದ್ದರು. ಕಾವೇರಿ ಗ್ರಾಮೀಣ ಬ್ಯಾಂಕ್‌ನ 503ನೇ ನೂತನ ಶಾಖೆಯನ್ನು ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಉದ್ಘಾಟಿಸಿ ಶುಭ ಕೋರಿದರು.







