ಲಂಡನ್: ಮುಸ್ಲಿಮ್ ವಿರೋಧಿ ದಾಳಿಯಲ್ಲಿ 5 ಪಟ್ಟು ಹೆಚ್ಚಳ

ಲಂಡನ್, ಜೂ. 8: ಲಂಡನ್ ಸೇತುವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ, ಬ್ರಿಟಿಶ್ ರಾಜಧಾನಿಯಲ್ಲಿ ಮುಸ್ಲಿಮ್ ವಿರೋಧಿ ಅಪರಾಧಗಳ ಸಂಖ್ಯೆಯಲ್ಲಿ ಐದು ಪಟ್ಟು ಏರಿಕೆಯಾಗಿದೆ ಎಂದು ಲಂಡನ್ ಮೇಯರ್ ಸಾದಿಖ್ ಖಾನ್ ಬುಧವಾರ ಹೇಳಿದ್ದಾರೆ.
ಪೊಲೀಸರು ‘ಶೂನ್ಯ-ಸಹನೆ ನೀತಿ’ಯನ್ನು ಅನುಸರಿಸುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.
‘‘ಈ ವರ್ಷದ ಪ್ರತಿದಿನದ ಸರಾಸರಿಗೆ ಹೋಲಿಸಿದರೆ, ಜೂನ್ 6ರವರೆಗೆ ನಡೆದ ಮುಸ್ಲಿಂ ವಿರೋಧಿ ಪ್ರಕರಣಗಳ ಸಂಖ್ಯೆಯಲ್ಲಿ 40 ಶೇಕಡ ಏರಿಕೆಯಾಗಿದೆ ಎಂದು ಹಂಗಾಮಿ ಅಂಕಿಸಂಖ್ಯೆಗಳು ಹೇಳುತ್ತವೆ’’ ಎಂದು ಹೇಳಿಕೆಯೊಂದರಲ್ಲಿ ಮೇಯರ್ ಕಚೇರಿ ತಿಳಿಸಿದೆ.
ಮಂಗಳವಾರ 54 ಜನಾಂಗೀಯ ಘಟನೆಗಳು ದಾಖಲಾಗಿವೆ. 2017ರಲ್ಲಿ ಈವರೆಗೆ ದಿನವೊಂದರಲ್ಲಿ ವರದಿಯಾದ ಘಟನೆಗಳು 38.
ಈ ಪೈಕಿ 20 ಮುಸ್ಲಿಮ್ ವಿರೋಧಿ ಘಟನೆಗಳಾಗಿವೆ. ಇದು 2017ರ ಪ್ರತಿದಿನದ ಶೇಕಡಾವಾರು 3.5ಕ್ಕಿಂತ ಹೆಚ್ಚಾಗಿದೆ.
Next Story





