ಜೂ. 9 ರಿಂದ ಕೆಎಸ್ಸಾರ್ಟಿಸಿ ಉಚಿತ ಬಸ್ ಪಾಸ್ ವಿತರಣೆ

ಬೆಂಗಳೂರು, ಜೂ. 8: ಸರಕಾರ ಆದೇಶದನ್ವಯ ಕೆಎಸ್ಸಾರ್ಟಿಸಿ ಪ್ರಸಕ್ತ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ಗಳನ್ನು ಜೂ. 9 ರಿಂದ ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಗಳ ಮೂಲಕ ವಿತರಣೆ ಮಾಡಲಾಗುತ್ತಿದೆ.
ಉಚಿತ ಬಸ್‌ಪಾಸ್‌ಗಳನ್ನು ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪಾಸ್‌ಗಳು ಪಡೆಯಲು ಅರ್ಜಿ ನಮೂದಿಸಬೇಕು. ಹಾಗೂ ಅದಕ್ಕೆ ಪೂರಕವಾದ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು. ಕೆಸ್ಸಾರ್ಟಿಸಿ ನಿಯಾಮಾವಳಿ ಅನ್ವಯ 80 ರೂ.ಗಳು ಸಂಸ್ಕರಣಾ ಶುಲ್ಕ ಹಾಗೂ 5 ರೂ.ಗಳ ಪರಿಹಾರ ನಿಧಿ ಶುಲ್ಕ ಪಾವತಿಸಬೇಕು.
ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿ ಫಾರಂಗಳನ್ನು ನಿಗದಿತ ಶುಲ್ಕದೊಂದಿಗೆ ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಗಳ ಮೂಲಕ ನಿಗಮಕ್ಕೆ ಸಲ್ಲಿಸಿ, ಪಾಸ್‌ಗಳನ್ನು ಪಡೆಯಬಹುದಾಗಿದೆ. ವಿದ್ಯಾರ್ಥಿ ವಾಸವಿರುವ ಶೈಕ್ಷಣಿಕ ಸ್ಥಳದಿಂದ 60 ಕಿ.ಮೀ. ಅಂತರದವರೆಗೆ ಪಾಸ್ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.
Next Story





