ಭಾರತ ಮೂಲದ ವ್ಯಕ್ತಿ ಗಗನಯಾತ್ರೆಗೆ ಆಯ್ಕೆ

ಹೂಸ್ಟನ್, ಜೂ. 8: ನಾಸಾ ತನ್ನ ಮುಂದಿನ ಖಗೋಳಯಾನಗಳಿಗಾಗಿ ಓರ್ವ ಭಾರತೀಯ ಅಮೆರಿಕನ್ ಸೇರಿದಂತೆ 12 ಹೊಸ ಖಗೋಳಯಾನಿಗಳನ್ನು ಆಯ್ಕೆ ಮಾಡಿದೆ.
ಭಾರತ ಮೂಲದ 39 ವರ್ಷದ ಲೆ.ಕ. ರಾಜಾ 'ಗ್ರೈಂಡರ್' ಚಾರಿ ಇದರಲ್ಲಿ ಸೇರಿದ್ದಾರೆ. ಅವರು 461ನೆ ಫ್ಲೈಟ್ ಟೆಸ್ಟ್ ಸ್ಕ್ವಾಡ್ರನ್‌ನ ಕಮಾಂಡರ್ ಹಾಗೂ ಕ್ಯಾಲಿಫೋರ್ನಿಯದ ಎಡ್ವರ್ಡ್ಸ್ ವಾಯುಪಡೆ ನೆಲೆಯಲ್ಲಿರುವ ಎಫ್-35 ಇಂಟಗ್ರೇಟಡ್ ಟೆಸ್ಟ್ ಫೋರ್ಸ್‌ನ ನಿರ್ದೇಶಕರೂ ಆಗಿದ್ದಾರೆ. ಅವರ ತಂದೆ ಭಾರತೀಯ.
ದಾಖಲಯೆ 18,300 ಅರ್ಜಿಗಳಿಂದ ಈ 12 ಮಂದಿಯನ್ನು ಆಯ್ಕೆ ಮಾಡಲಾಗಿದೆ.
Next Story





