ಬಾಸುಮಗೆ ಗೌರವ ಪ್ರಶಸ್ತಿ

ಉಡುಪಿ, ಜೂ.8: ಕರ್ನಾಟಕ ಬಾಲವಿಕಾಸ ಅಕಾಡೆಮಿ ನೀಡುವ 2016 -17ನೆ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಕಟಪಾಡಿ ವನಸುಮ ವೇದಿಕೆಯ ಸಂಚಾಲಕ, ರಂಗಕರ್ಮಿ ಬಾಸುಮ ಕೊಡಗು ಆಯ್ಕೆಯಾಗಿದ್ದಾರೆ.
ಜೂ.10ರಂದು ಧಾರವಾಡದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿರುವರು. ಪ್ರಶಸ್ತಿಯು ನಗದು ಹಾಗೂ ಫಲಕವನ್ನೊಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





