ಸೀತಾರಾಂ ಯೆಚೂರಿ ಹಲ್ಲೆ ಪ್ರಕರಣ
ಸಂಘ ಪರಿವಾರದ ವಿರುದ್ಧ ಕ್ರಮಕ್ಕೆ ಒತ್ತಾಯ

ದಾವಣಗೆರೆ, ಜೂ. 8: ದಿಲ್ಲಿಯ ಸಿಪಿಐಎಂ ಕೇಂದ್ರ ಕಚೇರಿ ಯಲ್ಲಿ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಪಕ್ಷದ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ನಗರದ ಶ್ರೀ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಸಂಘ ಪರಿವಾರದ ಕೃತ್ಯವನ್ನು ಖಂಡಿಸಿ ಘೋಷಣೆ ಕೂಗಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದಭರ್ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ. ಲಕ್ಷ್ಮೀನಾರಾಯಣ ಭಟ್ ಮಾತನಾಡಿ, ದಿಲ್ಲಿಯ ಸಿಪಿಐಎಂ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪತ್ರಿಕಾ ಗೋಷ್ಠಿಯನ್ನು ನಡೆಸುತ್ತಿದ್ದ ವೇಳೆ ಸಂಘ ಪರಿವಾರದ ಕಾರ್ಯಕರ್ತರು ನುಗ್ಗಿ ಹಲ್ಲೆ ನಡೆಸಿರುವುದು ಖಂಡನೀಯವಾಗಿದೆ.
ಯೆಚೂರಿ ಮೇಲೆ ನಡೆದ ಹಲ್ಲೆಯು ಪ್ರಜಾಪ್ರಭುತ್ವ ಮತ್ತು ಗಣತಂತ್ರದ ಮೇಲೆ ನಡೆದಿರುವ ದಾಳಿಯಾಗಿದೆ ಎಂದು ಅವರು ದೂರಿದರು. ಮಾಧ್ಯಮಗಳ ಜೊತೆಗೆ ಸೀತಾರಾಂ ಯೆಚೂರಿ ಮಾತನಾಡುವ ವೇಳೆ ಸಂಘ ಪರಿವಾರದ ಕಾರ್ಯಕರ್ತರು ಹೀಗೆ ದುರ್ವರ್ತನೆ ತೋರಿದ್ದಲ್ಲದೇ, ಯೆಚೂರಿ ಮೇಲೆ ಹಲ್ಲೆ ಮಾಡಿರುವುದನ್ನು ಇಡೀ ದೇಶವೇ ಗಮನಿಸುತ್ತಿದೆ.
ದೇಶಾದ್ಯಂತ ಸಂಘ ಪರಿವಾರದವರ ಇಂತಹದ್ದೊಂದು ಗೂಂಡಾ ಪ್ರವೃತ್ತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ ಎಂದರು.
ಯೆಚೂರಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡ ಇ. ಶ್ರೀನಿವಾಸ, ಸಿಐಟಿಯುನ ಉಮೇಶ ಕೈದಾಳೆ, ಎಸ್. ಸಿ. ಶ್ರೀನಿವಾ ಸಾಚಾರ್ಯ, ಬಿ.ಬಿ. ಹಾಲೇಶ, ನಗರಸಭೆ ಮಾಜಿ ಸದಸ್ಯ ಜಯಣ್ಣ ಜಾಧವ್, ಹರಿಹರದ ಈರಣ್ಣ, ಬಿಎಸ್ಸೆನ್ನೆಲ್ ನೌಕರರ ಸಂಘಟನೆಯ ಪರಮೇಶ್ವರಪ್ಪ, ರುದ್ರಪ್ಪ, ಅಶೋಕ್, ಆಟೊ ಚಾಲಕರ ಸಂಘದ ಅನ್ವರ್ ಸಾಬ್, ಅಣ್ಣಪ್ಪ ಸ್ವಾಮಿ, ಜಿ. ಲೋಕೇಶ ನಾಯ್ಕ, ಎ. ಗುಡ್ಡಪ್ಪ, ತಿಮ್ಮಣ್ಣ ಹೊನ್ನೂರು, ಭರಮಪ್ಪ, ಡಿಎಸ್ಸೆಸ್‌ನ ಮಂಜುನಾಥ ಕುಂದುವಾಡ ಮತ್ತಿತರರಿದ್ದರು.
ದೇಶದ ಸಂವಿಧಾನವನ್ನು ತಿರಸ್ಕರಿಸಿದ ಮತ್ತು ಮನು ಧರ್ಮ ಶಾಸ್ತ್ರವನ್ನೇ ಸಂವಿಧಾನವೆಂದು ಪರಿಗಣಿಸಿರುವ ಸಂಘ ಪರಿವಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವ, ಸಂವಿಧಾನ, ಸ್ವಾತಂತ್ರ್ಯ ಇತ್ಯಾದಿಗಳ ಮೇಲೆ ನಡೆಸಿರುವ ದಾಳಿಗಳು, ಸಂಘ ಪರಿವಾರದವರ -ಫ್ಯಾಶಿಸ್ಟ್, ಹಿಟ್ಲರ್ ಶಾಹಿ ನೀತಿಯನ್ನು ತೋರಿಸುತ್ತದೆ. ಕೆ. ಲಕ್ಷ್ಮೀನಾರಾಯಣ ಭಟ್, ಜಿಲ್ಲಾ ಕಾರ್ಯದರ್ಶಿ ಪಡಿತರ ವಿತರಣೆಯಲ್ಲಿ ವಿಳಂಬ: ಖಂಡನೆ







