ಅಕ್ರಮ ಮದ್ಯ ವಶ
ಚಿಕ್ಕಮಗಳೂರು, ಜೂ.8: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಡಿ ಖಚಿತ ಮಾಹಿತಿ ಆಧರಿಸಿ ಗುರುವಾರ ದಾಳಿ ನಡೆಸಿದ ತರೀಕೆರೆ ಪೊಲೀಸರು ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಮಹಿಳೆ ಅಮೃತಾಪುರ ಗ್ರಾಮದ ಶಕುಂತಲಮ್ಮ(46) ಎಂದು ಗುರುತಿಸಲಾಗಿದ್ದು, ದಾಳಿ ವೇಳೆ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆರೋಪಿ ಮಹಿಳೆಯು ಒಂದು ಚೀಲದಲ್ಲಿ ತುಂಬಿಸಿಟ್ಟುಕೊಂಡಿದ್ದ 1,200 ರೂ. ವೌಲ್ಯದ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Next Story





