ಬೆಂಗಳೂರು ಅರಮನೆಯಲ್ಲಿ ಸರಕಾರದಿಂದ ಇಫ್ತಾರ್ ಕೂಟ

ಬೆಂಗಳೂರು, ಜೂ.8: ರಮಝಾನ್ ಪ್ರಯುಕ್ತ ಬೆಂಗಳೂರು ಅರಮನೆಯಲ್ಲಿ ಇಫ್ತಾರ್ ಕೂಟ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಾಜುಬಾಯಿವಾಲಾ ಸೇರಿದಂತೆ ಸಂಪುಟದ ಹಲವು ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಭೋಜನದಲ್ಲಿ ಪಾಲ್ಗೊಂಡರು.
ಈ ಸಂದರ್ಭ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಪ್ರತಿ ವರ್ಷ ಪವಿತ್ರ ರಮಝಾನ್ ತಿಂಗಳಲ್ಲಿ ನಾನು ರಾಜ್ಯದ ಎಲ್ಲಾ ಮುಸ್ಲಿಮರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸುತ್ತೇನೆ. ಈ ವರ್ಷವೂ ರಾಜ್ಯದ ಹಲವರು ಇಫ್ತಾರ್ ಕೂಟಕ್ಕೆ ಆಗಮಿಸಿದ್ದಾರೆ. ಎಲ್ಲರಿಗೂ ರಮಝಾನ್ ಹಬ್ಬದ ಶುಭಾಶಯಗಳು, ರಾಜ್ಯದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ" ಎಂದರು.
Next Story





