ಕೊಣಾಜೆ: ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ
ಕೊಣಾಜೆ, ಜೂ. 9: ಕೊಣಾಜೆ ಗ್ರಾಮದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸ್ಥಳೀಯ ಅರ್ಹ ಮೂವರು ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೆರವಿಗಾಗಿ ಬಿಲ್ಲವ ಬಳಗ(ರಿ) ಕೊಣಾಜೆ ಇದರ ವತಿಯಿಂದ ಧನ ಸಹಾಯವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅವಿನಾಶ್ ಪೂಜಾರಿ ಪೊಳಲಿ, ಭರತ್ ಮಂಜನಾಡಿ, ಕೊಣಾಜೆ ಪಂ. ಸದಸ್ಯರಾದ ಹರಿಶ್ಚಂದ್ರ ಶೆಟ್ಟಿಗಾರ್, ವರದ್‌ರಾಜ್ ಕೊಣಾಜೆ, ಬಿಲ್ಲವ ಸಂಘದ ಪ್ರಮುಖರಾದ ಸುಭಾಷ್ ಧರ್ಮನಗರ, ವಿಜಯ ಪಾವೂರು, ಚಂದ್ರಹಾಸ್ ಬಂಗೇರ, ಚಂದ್ರಹಾಸ್ ಅಮೀನ್ ಹರೇಕಳ, ಜಯಾನಂದ ಅಮೀನ್ ಕಿಲ್ಲೂರು, ನವೀನ್ ಮುಟ್ಟಿಂಜ, ಬಿಲ್ಲವ ಬಳಗದ ಅಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷರಾದ ಶಿವಪ್ಪ ಕಂಬಳಕೋಡಿ,ಸದಸ್ಯರಾದ ಪುಷ್ಪರಾಜ್, ಜಯರಾಜ್ ಪ್ರಕಾಶ್ ಆರ್ಯ, ನಾರಾಯಣ, ಹೇಮಂತ್, ಕೃಷ್ಣ, ಅರುಣ್ ಪಟ್ಲ, ಪುರುಷೋತ್ತಮ ಮುಂತಾದವರು ಉಪಸ್ಥಿತರಿದ್ದರು.
Next Story





