ತನ್ನ ಮನೆಯ ಕೋಣೆಯಲ್ಲಿ ನುಸುಳಿದ್ದ ಕಾಳಸರ್ಪವನ್ನು ಈ ಟ್ಯಾಟೂ ಆರ್ಟಿಸ್ಟ್ ಏನು ಮಾಡಿದಳು ಗೊತ್ತೇ...?
ವೀಡಿಯೊ ನೋಡಿ

ಹೆಚ್ಚಿನ ಜನರಿಗೆ ಮನೆಗೆ ಬಂದಾಗ ಎಲ್ಲಾದರೂ ಪುಟ್ಟ ಹಲ್ಲಿ ಅಥವಾ ಇನ್ಯಾವುದೋ ಕೀಟ ಸೇರಿಕೊಂಡಿದ್ದು ಕಂಡು ಬಂದರೆ ಕಿರಿಕಿರಿಯಾಗುತ್ತದೆ. ಅಂತಹುದರಲ್ಲಿ ಅಮೆರಿಕದ ಉತ್ತರ ಕೆರೋಲಿನಾದ ಟ್ಯಾಟೂ ಆರ್ಟಿಸ್ಟ್ ಸನ್‌ಶೈನ್ ಮೆಕ್ಕರಿ ಸಂಜೆ ಮನೆಗೆ ವಾಪಸಾದಾಗ ಕೋಣೆಯಲ್ಲಿ 5-6 ಅಡಿ ಉದ್ದದ ಕಾಳಸರ್ಪ ಕಣ್ಣಿಗೆ ಬಿದ್ದರೆ ಅವಳಿಗೆ ಹೇಗಾದೀತು? ಸರ್ಪವನ್ನು ನೋಡಿದರೂ ಎದೆಗುಂದದ ಈ ಮಹಿಳೆ ತಲೆದಿಂಬಿನ ಹೊದಿಕೆ ಬಳಸಿ ಹಾವನ್ನು ಬಂಧಿಸಿ ಅದನ್ನು ದೂರಕ್ಕೆ ಸಾಗಿಸಿದ ವೀಡಿಯೊ ವೈರಲ್ ಆಗಿದೆ. ಈಗಾಗಲೇ 36ಲಕ್ಷ ಜನರು ವೀಡಿಯೊವನ್ನು ವೀಕ್ಷಿಸಿದ್ದು,37,000 ಬಾರಿ ಶೇರ್ ಆಗಿದೆ.
Next Story





