ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ
ಬಂಟ್ವಾಳ,ಜೂ.9 : ಇತ್ತಿಫಾಕ್ ಮೀಲಾದ್ ಕಮಿಟಿಯಿಂದ 38 ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಗಡಿಯಾರ್ ಎಂಜೆಎಂ ಮದರಸ ಹಾಲ್ ನಲ್ಲಿ ನಡೆಯಿತು.
ಇತ್ತಿಫಾಕ್ ಮೀಲಾದ್ ಕಮಿಟಿ ಉಪಾಧ್ಯಕ್ಷ ಯೂಸುಫ್ ಜೋಗಿಬೆಟ್ಟು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು.
ಸ್ಥಳೀಯ ಖತೀಬ ಜಮಾಲುದ್ದೀನ್ ದಾರಿಮಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಉತ್ತಮ ಜೀವನ ಅಂದರೆ ವಿದ್ಯಾರ್ಥಿ ಜೀವನ. ವಿದ್ಯಾಭ್ಯಾಸ ಸಮಯದಲ್ಲಿ ಉತ್ತಮ ರೀತಿಯಲ್ಲಿ ಕಲಿತು ಉತ್ತಮ ಪ್ರಜೆಯಾಗಲು ಸಾಧ್ಯ. ನಮ್ಮ ಭವಿಷ್ಯ ವಿದ್ಯಾರ್ಥಿ ಜೀವನದಲ್ಲಿ ತಿಳಿದು ಬರುತ್ತದೆ. ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹಸನ್ ವಿದ್ಯಾನಗರ ಸಂಘದ ಗೌರವಾಧ್ಯಕ್ಷ ಹೈದರ್ ವಿದ್ಯಾನಗರ, ಕೋಶಾಧಿಕಾರಿ ಅಲ್ತಾಫ್ ವಿದ್ಯಾನಗರ, ಇಸ್ಮಾಯಿಲ್ ವಿದ್ಯಾನಗರ, ಇರ್ಷಾದ್ ಬಂದರ್ ಈ ಸಂದರ್ಭ ಉಪಸ್ಥಿತಿಯಲ್ಲಿದ್ದರು. ಉಪಾಧ್ಯಕ್ಷ ನಜೀಬ್ ಜೋಗಿಬೆಟ್ಟು ಸ್ವಾಗತಿಸಿದರು. ಅಬ್ದುಲ್ ರಶೀದ್ ವಂದಿಸಿದರು.
Next Story





