ಮೀನು ಹಿಡಿಯಲು ತೆರಳುತ್ತಿದ್ದ ಯುವಕನಿಗೆ ತಂಡದಿಂದ ಆಕ್ರಮಣ
ಮಂಜೇಶ್ವರ, ಜೂ.9: ಮೀನು ಹಿಡಿಯಲು ತೆರಳುತ್ತಿದ್ದ ಯುವಕನನ್ನು ತಂಡವೊಂದು ಆಕ್ರಮಿಸಿದ ಘಟನೆ ನಡೆದಿದೆ.
ಬಂಬ್ರಾಣ ಮುಗೇರು ನಿವಾಸಿ ರಾಜೇಶ್ (22) ಗಾಯಗೊಂಡು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮುಂಬೈಯಲ್ಲಿ ಹೊಟೇಲ್ ಕಾರ್ಮಿಕನಾಗಿದ್ದ ರಾಜೇಶ್ ಇತ್ತೀಚೆಗೆ ಊರಿಗೆ ಬಂದಿದ್ದರು. ಗುರುವಾರ ಸಂಜೆ ಶಿರಿಯ ಹೊಳೆ ಯಿಂದ ಮೀನು ಹಿಡಿಯಲೆಂದು ತೆರಳುತ್ತಿದ್ದ ವೇಳೆ ಸುಮಾರು ಹದಿನೈದು ಮಂದಿಯ ತಂಡ ಬ್ಯಾಟ್‌ನಿಂದ ಹೊಡೆದು ಗಾಯಗೊಳಿಸಿರುವುದಾಗಿ ದೂರಲಾಗಿದೆ.
Next Story





