ಟ್ರ್ಯಾಕ್ಟರ್ ಪಲ್ಟಿ: ಚಾಲಕ ಮೃತ್ಯು

ಕೆ.ಆರ್.ಪೇಟೆ, ಜೂ. 9: ತಾಲೂಕಿನ ಲಕ್ಷ್ಮೀಪುರ ಗ್ರಾಮದ ಬಳಿ ತೋಟಕ್ಕೆ ಗೋಡು ಮಣ್ಣನ್ನು ಸುರಿಯಲು ಹೋಗಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ತಾಲೂಕಿನ ಬೊಮ್ಮೇನಹಳ್ಳಿಯ ಚಿಕ್ಕೇಗೌಡರ ಪುತ್ರ ಆನಂದ (25) ಮೃತರು ಎಂದು ಗುರುತಿಸಲಾಗಿದೆ.
ತೆರನೇನಹಳ್ಳಿ ಗ್ರಾಮದ ಪಾಂಡು ಅವರ ಜಮೀನಿಗೆ ಹೊಸ ಹೊಳಲು ಚಿಕ್ಕಕೆರೆಯಿಂದ ಗೋಡುಮಣ್ಣನ್ನು ತನ್ನ ಟ್ರ್ಯಾಕ್ಟರ್‌ನಲ್ಲಿ ತೆಗೆದುಕೊಂಡು ಹೋಗಿದ್ದಾಗ ಈ ಅವಘಡ ಸಂಭವಿಸಿದೆ.
ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





