ಯುನಿವೆಫ್: ಜೂ.10ರಿಂದ ಕುದ್ರೋಳಿ ಜಾಮಿಯ ಮಸೀದಿಯಲ್ಲಿ ರಮಝಾನ್ ಪ್ರವಚನ
ಮಂಗಳೂರು, ಜೂ. 9: ಯುನಿವೆಫ್ ಕರ್ನಾಟಕ ಕುದ್ರೋಳಿ ಶಾಖೆಯ ವತಿಯಿಂದ ಕುದ್ರೋಳಿಯ ಜಾಮಿಅ ಮಸೀದಿಯಲ್ಲಿ ಯುನಿವೆಫ್ ರಾಜ್ಯಾಧ್ಯಕ್ಷ ಹಾಗೂ ಮುಕ್ಕಚ್ಚೇರಿ ನಿಮ್ರಾ ಮಸೀದಿಯ ಖತೀಬ್ ರಫೀಉದ್ದೀನ್ ಕುದ್ರೋಳಿ ಯವರಿಂದ ಜೂ.10 ರಿಂದ ರಮಝಾನ್ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜೂ.10 ರಂದು ಸಹಾಬಾಗಳ ತ್ಯಾಗ ಮತ್ತು ಈಗಿನ ಮುಸ್ಲಿಮರು, ಜೂ.11 ರಂದು ಬದ್ರ್ - ಮರೆಯಲಾಗದ ವಿಜಯ
ಎಂಬ ವಿಷಯದಲ್ಲಿ ಪ್ರವಚನ ನಡೆಯಲಿದೆ ಎಂದು ಕುದ್ರೋಳಿ ಶಾಖಾಧ್ಯಕ್ಷ ಹುದೈಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





