ನಾವು ತಲೆಬಾಗುವುದಿಲ್ಲ: ಕತರ್ ಘೋಷಣೆ

ದೋಹಾ (ಕತರ್), ಜೂ. 9: ಅರಬ್ ದೇಶಗಳು ವಿಧಿಸಿರುವ ನಿಬಂಧವನ್ನು ಸಮರ್ಥವಾಗಿ ಎದುರಿಸಿ ಹೊರಬರುವುದಾಗಿ ಕತರ್ ಗುರುವಾರ ಹೇಳಿದೆ. ವಲಯದ ಅತ್ಯಂತ ದೊಡ್ಡ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ತನ್ನ ವಿದೇಶ ನೀತಿಯ ಸಾರ್ವಭೌಮತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದಾಗಿಯೂ ಅದು ತಿಳಿಸಿದೆ.
ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್, ಈಜಿಪ್ಟ್ ಮತ್ತು ಯಮನ್ ದೇಶಗಳು ಆ ದೇಶದೊಂದಿಗೆ ಸೋಮವಾರ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದ್ದವು.
ಬಿಕ್ಕಟ್ಟು ಪರಿಹರಿಸಲು ಪ್ರಯತ್ನಿಸಿದ್ದ ಕುವೈತ್ ಅಮೀರ್ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ.
‘‘ನಾವು ಯಶಸ್ವಿ ಹಾಗೂ ಪ್ರಗತಿಪರರಾಗಿದ್ದೇವೆ. ಹಾಗಾಗಿ, ನಮ್ಮನ್ನು ಪ್ರತ್ಯೇಕಿಸಲಾಗಿದೆ. ನಾವು ಶಾಂತಿಯ ಪ್ರತಿಪಾದಕರು’’ ಎಂದು ಕತರ್ ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್-ಥಾನಿ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
Next Story





