ಚಾಕು ಹಿಡಿದ ವ್ಯಕ್ತಿಯಿಂದ ಹಲವರ ಒತ್ತೆಸೆರೆ

ಲಂಡನ್, ಜೂ. 9: ಈಶಾನ್ಯ ಇಂಗ್ಲೆಂಡ್‌ನ ನ್ಯೂಕ್ಯಾಸಲ್‌ನಲ್ಲಿರುವ ಉದ್ಯೋಗ ಕೇಂದ್ರವೊಂದರಲ್ಲಿ ಚಾಕು ಹಿಡಿದ ವ್ಯಕ್ತಿಯೊಬ್ಬ ಉದ್ಯೋಗಿಗಳನ್ನು ಹಲವು ಗಂಟೆಗಳ ಕಾಲ ಒತ್ತೆಸೆರೆಯಲ್ಲಿಟ್ಟನು ಎಂದು ಪೊಲೀಸರು ಶುಕ್ರವಾರ ತಿಳಿಸಿದರು.
‘‘ಪರಿಣತ ಸಂಧಾನಕಾರರು ಸ್ಥಳದಲ್ಲಿದ್ದಾರೆ’’ ಎಂದು ನಾರ್ತಂಬ್ರಿಯ ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದರು.
‘‘ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಭಾವಿಸಲಾಗಿದೆ ಹಾಗೂ ಆಕ್ರಮಣಕಾ ಒಬ್ಬನೇ ಕಟ್ಟಡದಲ್ಲಿದ್ದಾನೆ’’ ಎಂದು ಪೊಲೀಸರು ಹೇಳಿದರು.
Next Story





