ಜೂ.23-25:ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಛಾಯಾಗ್ರಹಣ ವಸ್ತು ಪ್ರದರ್ಶನ
ಉಡುಪಿ, ಜೂ.9: ಕರ್ನಾಟಕ ಛಾಯಾಚಿತ್ರ ಗ್ರಾಹಕರ ಉನ್ನತ ಸಾಧನೆಗಾಗಿ, ವೃತ್ತಿಯಲ್ಲಿ ನೈಪುಣ್ಯತೆಗಾಗಿ, ನೂತನ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಆವಿಷ್ಕಾರಗಳನ್ನು ಖುದ್ದಾಗಿ ವೀಕ್ಷಿಸಲು ಅವಕಾಶವಾಗುವಂತೆ ಕರ್ನಾಟಕ ಛಾಯಾಗ್ರಾಹಕರ ಸಂಘ (ಕೆಪಿಎ) ಜೂ.23ರಿಂದ 25ರವರೆಗೆ 5ನೇ ಅಂತಾರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನ ‘ಡಿಜಿ ಇಮೇಜ್-2017’ ಅನ್ನು ಬೆಂಗಳೂರಿನ ತುಮಕೂರು ರಸ್ತೆಯ ನೀಲಕಂಠ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಿದೆ ಎಂದು ಕೆಪಿಎ ಉಪಾಧ್ಯಕ್ಷ ನಾಗೇಶ್ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಇದು ಕೇವಲ ವಸ್ತುಪ್ರದರ್ಶನವಾಗಿರದೆ ಛಾಯಾಗ್ರಾಹಕರ ಜ್ಞಾನವನ್ನು ಹೆಚ್ಚಿಸಲಿದೆ. ದೇಶದ ಸರ್ವಶ್ರೇಷ್ಠ ಛಾಯಾಗ್ರಾಹಕರಿಂದ ತರಬೇತಿ, ಆಧುನಿಕ ಕ್ಯಾಮರಾಸಲಕರಣೆಗಳ ಬಗ್ಗೆ ಸಮಗ್ರ ಮಾತಿಹಿ ಇಲ್ಲಿ ಲಭ್ಯವಾಗಲಿದೆ ಎಂದರು. ಶುಕ್ರವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಇದು ಕೇವಲ ವಸ್ತುಪ್ರದರ್ಶನವಾಗಿರದೆ ಛಾಯಾಗ್ರಾಹಕರ ಜ್ಞಾನವನ್ನು ಹೆಚ್ಚಿಸಲಿದೆ. ದೇಶದ ಸರ್ವಶ್ರೇಷ್ಠ ಛಾಯಾಗ್ರಾಹಕರಿಂದ ತರಬೇತಿ, ಆುನಿಕಕ್ಯಾಮರಾಸಲಕರಣೆಗಳಬಗ್ಗೆಸಮಗ್ರಮಾತಿಹಿಇಲ್ಲಿಲ್ಯವಾಗಲಿದೆ ಎಂದರು.
ವಿಶ್ವದರ್ಜೆಯ ಕೆಮರಾ ಸಲಕರಣೆಗಳ ಮಾರಾಟಗಾರರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ರಾಜ್ಯಗಳಿಂದ 110ಕ್ಕೂ ಹೆಚ್ಚು ಪ್ರದರ್ಶನಕಾರರು ಭಾಗವಹಿಸುತ್ತಿರುವ ಈ ಪ್ರದರ್ಶನದಲ್ಲಿ 2000ಕ್ಕೂ ಹೆಚ್ಚಿನ ಛಾಯಾಗ್ರಹಣ ಕ್ಷೇತ್ರಕ್ಕೆ ಸಂಬಂಧಪಟ್ಟ ಸಲಕರಣೆಗಳ ಪ್ರದರ್ಶನರುತ್ತದೆ ಎಂದು ನಾಗೇಶ್ ತಿಳಿಸಿದರು. ವಿಶ್ವದರ್ಜೆಯ ಕೆಮರಾ ಸಲಕರಣೆಗಳ ಮಾರಾಟಗಾರರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.ವಿವಿ ರಾಜ್ಯಗಳಿಂದ 110ಕ್ಕೂ ಹೆಚ್ಚು ಪ್ರದರ್ಶನಕಾರರು ಭಾಗವಹಿಸುತ್ತಿರುವ ಈ ಪ್ರದರ್ಶನದಲ್ಲಿ 2000ಕ್ಕೂ ಹೆಚ್ಚಿನ ಛಾಯಾಗ್ರಹಣ ಕ್ಷೇತ್ರಕ್ಕೆ ಸಂಬಂಪಟ್ಟ ಸಲಕರಣೆಗಳ ಪ್ರದರ್ಶನರುತ್ತದೆ ಎಂದು ನಾಗೇಶ್ ತಿಳಿಸಿದರು.
ಕಲ್ಯಾಣ ನಿಧಿಗೆ: ಈ ಪ್ರದರ್ಶನದಿಂದ ಬರುವ ಬಹುಪಾಲು ಆದಾಯವನ್ನು ರಾಜ್ಯ ಛಾಯಾಗ್ರಾಹಕರ ಕಲ್ಯಾಣನಿಧಿ ಟ್ರಸ್ಟ್‌ಗೆ ನೀಡಲಾಗುವುದು. ಈ ಮೂಲಕ ತೊಂದರೆಯಲ್ಲಿರುವ ರಾಜ್ಯದ ಛಾಯಾಗ್ರಾಹಕರ ನೆರವಿಗೆ ಸಹಾಯ ನೀಡುವುದು ಮತ್ತು ರಾಜ್ಯದ ಛಾಯಾಗ್ರಾಹಕರಿಗೆ ಉಚಿತ ತಾಂತ್ರಿಕ ಕಾರ್ಯಾಗಾರಗಳನ್ನು ನಡೆಸುವ ಉದ್ದೇಶವಿದೆ ಎಂದವರು ವಿವರಿಸಿದರು.
ರಾಜ್ಯ ಸಂಘದ ವಜ್ರಮಹೋತ್ಸವ:
ನಾಲ್ಕನೇ ರಾಷ್ಟ್ರ ಮಟ್ಟದ ಹಾಗೂ ಐದನೇ ರಾಜ್ಯ ಮಟ್ಟದ ಛಾಯಾಗ್ರಹಣ ಸ್ಪರ್ಧೆಗಳನ್ನು ಈ ವರ್ಷದ ಜುಲೈ/ಆಗಸ್ಟ್ ತಿಂಗಳಲ್ಲಿ ಏರ್ಪಡಿಸಲಾಗುವುದು. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ರಾಜ್ಯದ ಎಲ್ಲಾ ವೃತ್ತಿಪರ ಹಾಗೂ ಹವ್ಯಾಸಿ ಛಾಯಾಗ್ರಾಹಕರುಗಳನ್ನು ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.
ಸೌತ್‌ಕೆನರಾ ಫೊಟೋಗ್ರಾಫರ್ಸ್ ಆಸೋಸಿಯೇಶನ್ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷ ವಿಲ್ಸನ್, ಕೋಶಾಧಿಕಾರಿ ದಯಾನಂದ ಬಂಟ್ವಾಳ, ರಾಜ್ಯ ವಲಯಾಧ್ಯಕ್ಷ ವಾಸುದೇವ ರಾವ್, ಉಡುಪಿ ವಲಯಾಧ್ಯಕ್ಷ ವಾಮನ್ ಪಡುಕೆರೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







