ಬೆಳ್ಳಾರೆ ಠಾಣೆಯ ಎಎಸ್ಸೈ ಪತ್ನಿ ಆತ್ಮಹತ್ಯೆ
ಕಡಬ, ಜೂ.9: ಇಲ್ಲಿನ ಐತ್ತೂರು ಗ್ರಾಮದ ಕೊಡೆಂಕೀರಿ ನಿವಾಸಿ ಬೆಳ್ಳಾರೆ ಪೊಲೀಸ್ ಠಾಣೆಯ ಎಎಸ್ಸೈ ಬಾಲಚಂದ್ರ ಎಂಬವರ ಪತ್ನಿ ಜಾನಕಿ (51) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕೌಟುಂಬಿಕ ಕಾರಣಗಳಿಂದಾಗಿ ಮನನೊಂದು ತೋಟದಲ್ಲಿನ ಕೃಷಿಗೆ ಸಿಂಪಡಿಸಲೆಂದು ತಂದಿರಿಸಿದ್ದ ವಿಷವನ್ನು ಸೇವಿಸಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿರಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story