ಇಫ್ತಾರ್ ಕೂಟ, ಕೌನ್ಸೆಲಿಂಗ್ ಕಾರ್ಯಕ್ರಮ

ಮಂಗಳೂರು, ಜೂ.9: ನಗರದ ಜೆಪ್ಪುನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗ ನೈಝೇಶನ್ ಆಫ್ ಇಂಡಿಯಾ(ಎಸ್‌ಐಒ) ಮಂಗಳೂರು ಹಾಗೂ ಅಂಬೇಡ್ಕರ್ ಫ್ರೆಂಡ್ಸ್ ಕ್ಲಬ್ ಜಂಟಿಯಾಗಿ ಇಫ್ತಾರ್ ಕೂಟ ಹಾಗೂ ಕೌನ್ಸೆಲಿಂಗ್ ಕಾರ್ಯಕ್ರಮ ಆಯೋಜಿಸಿತ್ತು.
ಎಸ್‌ಐಒ ದ.ಕ. ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್ ‘ಹಲವು ಧರ್ಮಗಳು ಒಂದು ಭಾರತ’ ಎಂಬ ವಾರ್ಷಿಕ ಅಭಿಯಾನದ ಅಂಗವಾಗಿ ಮಾತನಾಡಿದರು.
ಡಾ.ಮಿಸ್ ಅಬ್, ನಾಯಕ ರಾಮದಾಸ ಮಾತನಾಡಿದರು.
ಇದೇ ವೇಳೆ ಎಸೆಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸಂತ ಕುಮಾರ ವಹಿಸಿದ್ದರು. ಮುಬೀನ್ ಬೆಂಗ್ರೆ ವಂದಿಸಿದರು. ಎಎಫ್‌ಸಿ ಅಧ್ಯಕ್ಷೆ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸಂಶೋಧನಾ ವಿದ್ಯಾರ್ಥಿ ವರುಣ್, ಎಸ್‌ಐಒ ಜಿಲ್ಲಾ ಕಾರ್ಯದರ್ಶಿ ನಿಝಾಮ್ ಉಪಸ್ಥಿತರಿದ್ದರು.
Next Story





