ಮಹಿಳೆ ಆತ್ಮಹತ್ಯೆ
ಮೂಡಿಗೆರೆ, ಜೂ.10: ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಹೋರಾಡುತಿದ್ದ ಫಲ್ಗುಣಿ ಗ್ರಾಮದ ಕಾವ್ಯ(29) ಎಂಬ ಗೃಹಿಣಿ ಮೃತಪಟ್ಟಿರುವುದಾಗಿ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫಲ್ಗುಣಿ ಸಮೀಪದ ಹಳಿಕೆಯ ಕಾವ್ಯ ಮೂರು ವರ್ಷಗಳ ಹಿಂದೆ ಫಲ್ಗುಣಿ ಗ್ರಾಮದ ಸತೀಶ್ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದರು. ಅವರಿಗೆ ಎರಡು ವರ್ಷದ ಗಂಡು ಮಗುವಿದ್ದು ಫಲ್ಗುಣಿಯಲ್ಲಿ ವಾಸವಾಗಿದ್ದರು. ಸಂಕುಚಿತ ಮನೋಭಾವ ಹೊಂದಿದ್ದ ಅವರು, ಜೀವನದಲ್ಲಿ ಜಿಗುಪ್ಸೆಗೊಂಡು ಕಳೆದ ಎಂಟು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ತಕ್ಷಣ ಅವರನ್ನು ಬಿಳ್ಳೂರು ಕ್ರಾಸ್‌ನ ಬಿಜಿಎಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿರುವುದಾಗಿ ಮೃತರ ಸಹೋದರ ಕೀರ್ತಿ ಬಣಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Next Story





