ತಿಪ್ಲಪದವು: ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು
ಕೊಣಾಜೆ, ಜೂ.10: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಕೊಣಾಜೆ ಠಾಣಾ ವ್ಯಾಪ್ತಿಯ ತಿಪ್ಲಪದವು ಬಳಿ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ವಿದ್ಯುತ್ ಕಂಬಗಳು ಉರುಳಿದ ಪರಿಣಾಮ ಶನಿವಾರ ಮುಂಜಾನೆಯಿಂದ ಕೊಣಾಜೆ ಪ್ರದೇಶದಲ್ಲಿ ವಿದ್ಯುತ್ ಇಲ್ಲದೇ ಜನರು ಪರದಾಡಬೇಕಾದ ಪರಿಸ್ಥಿತಿ ಎದುರಾಯಿತು.
ಶನಿವಾರ ಮುಂಜಾನೆಯಿಂದ ಸುರಿದ ಮಳೆಗೆ ಮೆಸ್ಕಾಂ ಸಿಬ್ಬಂದಿಗಳಿಗೆ ದುರಸ್ತಿ ಕಾರ್ಯ ಕೈಗೊಳ್ಳಲು ತೊಡಕುಂಟಾದ ಕಾರಣ ಸಂಜೆಯವರೆಗೂ ವಿದ್ಯುತ್ ಇಲ್ಲದೇ ಕತ್ತಲಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಬಂತು.
ಕೆಲವು ತಿಂಗಳ ಹಿಂದೆಯೇ ಇಲ್ಲಿನ ಕಂಬಗಳು ಉರುಳಿ ಬೀಳುವ ಹಂತಕ್ಕೆ ತಲುಪಿತ್ತು. ಆದರೆ ತುರ್ತು ಕ್ರಮ ಕೈಗೊಳ್ಳದ ಕಾರಣ ನಿನ್ನೆಯ ಮಳೆಗೆ ಉರುಳಿ ಬಿದ್ದು ಜನರು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
Next Story





