ಆಳ್ವಾಸ್: ವರ್ತಮಾನದಲ್ಲಿ ನರ್ಸಿಂಗ್ ಸೇವೆ
ಮೂಡುಬಿದಿರೆ,ಜೂ.10: ಆಳ್ವಾಸ್ ನರ್ಸಿಂಗ್ ಕಾಲೇಜಿನ ವತಿಯಿಂದ ‘ವರ್ತಮಾನದಲ್ಲಿ ನರ್ಸಿಂಗ್ ಸೇವೆ’ ಕುರಿತು ಒಂದು ದಿನದ ಪ್ರಾದೇಶಿಕ ವಿಚಾರ ಸಂಕಿರಣ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಯಿತು.
ಮಣಿಪಾಲ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕಿ ಡಾ.ಮಮತಾ ಎಸ್ ಪೈ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದರು. ವಿಚಾರ ಸಂಕಿರಣಗಳು ಅವಕಾಶಗಳನ್ನು ತಂದುಕೊಡುವಂತದ್ದು. ಅವುಗಳಿಂದ ನಮ್ಮ ಚಿಂತನೆ, ಯೋಜನೆಗಳನ್ನು ಇತರರೊಂದಿಗೆ ನೇರವಾಗಿ ವಿನಿಮಯ ಮಾಡಿಕೊಳ್ಳಬಹುದು. ನರ್ಸಿಂಗ್ ಕ್ಷೇತ್ರದಲ್ಲಿ ಜ್ಞಾನ ಪ್ರಸರಣಗೊಳ್ಳಲು ಕೂಡ ವಿಚಾರ ಸಂಕಿರಣ ನೆರವಾಗುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನರ್ಸಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗಮನಿಸಬೇಕು. ತಂತ್ರಜ್ಞಾನದೊಂದಿಗೆ ಮೌಲ್ಯಗಳಿದ್ದರೆ ವೈದ್ಯಕೀಯ ಕ್ಷೇತ್ರದಲ್ಲಿ ಗುಣಮಟ್ಟವನ್ನು ಕಾಯ್ದಿರಿಸಿಕೊಳ್ಳಲು ಸಾಧ್ಯ. ವಿದೇಶಿ ಮಾದರಿಯ ತಂತ್ರಜ್ಞಾನ ಸಹಿತ ವಿದೇಶಿ ಮಾದರಿಯ ವೈದ್ಯಕೀಯ ಸೇವೆ ನಮ್ಮ ದೇಶದಲ್ಲಿ ಬಂದರೆ ತ್ವರಿತವಾಗಿ ಸೇವೆ ನೀಡಬಹುದು ಎಂದರು.
ವಿಚಾರ ಸಂಕಿರಣಗಳು ನಿರ್ದಿಷ್ಟ ಕ್ಷೇತ್ರ ಬಗ್ಗೆ ಅರಿವು ಮೂಡಿಸಬಹುದು. ಆದರೆ ಅದು ಸಾರ್ಥಕವಾಗಬೇಕಾದರೆ, ಅದರಲ್ಲಿ ಮಂಡನೆಯಾದ ವಿಚಾರಗಳು ಶ್ರಮದ ಮುಖೇನ ಕಾರ್ಯರೂಪಕ್ಕೆ ಬರಬೇಕು ಎಂದರು.