ಸಹೋದ್ಯೋಗಿಯಿಂದ ಕಿರುಕುಳ: ಠಾಣೆಯಲ್ಲೇ ಆತ್ಮಹತ್ಯೆಗೆ ಶರಣಾದ ಮಹಿಳಾ ಕಾನ್ ಸ್ಟೇಬಲ್

ಲುಧಿಯಾನ, ಜೂ.10: ಸಹೋದ್ಯೋಗಿಯ ಕಿರುಕುಳದಿಂದ ಬೇಸತ್ತ ಮಹಿಳಾ ಕಾನ್ ಸ್ಟೇಬಲ್ ಒಬ್ಬರು ಪೊಲೀಸ್ ಠಾಣೆಯ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಲುಧಿಯಾನದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ಮಹಿಳಾ ಕಾನ್ ಸ್ಟೇಬಲ್ ರ ತಂದೆಯ ದೂರಿನಂತೆ ಸಹೋದ್ಯೋಗಿತ ಮೇಲೆ ಪ್ರಕರಣ ದಾಖಲಾಗಿದೆ.
ಲುಧಿಯಾನದ ನಿಧಾನ್ ಪೊಲೀಸ್ ಠಾಣೆಯಲ್ಲಿ ಉದ್ಯೋಗದಲ್ಲಿದ್ದ ಅಮನ್ ಪ್ರೀತ್ ಕೌರ್ ಅವರಿಗೆ ಪೊಲೀಸ್ ಪೇದೆ ನಿರ್ಭಯ್ ಸಿಂಗ್ ಎಂಬಾತ ನಿರಂತರ ಕಿರುಕುಳ ನೀಡುತ್ತಿದ್ದ. ಇದರಿಂದ ಮನನೊಂದ ಆಕೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿಗೆ ನಿರ್ಭಯ್ ಸಿಂಗ್ ಕಾರಣ ಎಂದು ಕೌರ್ ತಂದೆ ದೂರು ನೀಡಿದ್ದಾರೆ.
ಕೌರ್ ತಂದೆ ನೀಡಿದ ದೂರಿನನ್ವಯ ನಿರ್ಭಯ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸುರ್ಜಿತ್ ಸಿಂಗ್ ಮಾಹಿತಿ ನೀಡಿದ್ದಾರೆ.
Next Story





