ಡೆಮಾಕ್ರಾಟರಿಗೆ ಆಡಳಿತ ಮಾಹಿತಿ ನಿರ್ಬಂಧ: ಟ್ರಂಪ್ ವಿರುದ್ಧ ಸೆನೆಟರ್ ಚುಕ್ ಗ್ರಾಸ್ಲೆ ಆಕ್ರೋಶ

ವಾಶಿಂಗ್ಟನ್,ಜೂ.10: ತನ್ನ ಆಡಳಿತದ ಕುರಿತ ಮಾಹಿತಿಗಳು ಪ್ರತಿಪಕ್ಷವಾದ ಡೆಮಾಕ್ರಾಟ್‌ನ ಸಂಸದರಿಗೆ ದೊರೆಯದಂತೆ ತಡೆಹಿಡಿದಿರುವ ರಿಪಬ್ಲಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ನಡೆಯನ್ನು ರಿಪಬ್ಲಿಕನ್ ಪಕ್ಷದ ಅತ್ಯಂತ ಪ್ರಭಾವಿ ನಾಯಕರಲ್ಲೊಬ್ಬರಾದ ಚುಕ್ ಗ್ರಾಸ್ಲೆ ಬಲವಾಗಿ ಶುಕ್ರವಾರ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಅವರು ಶ್ವೇತಭವನಕ್ಕೆ 2100 ಪದಗಳ ಪತ್ರವೊಂದನ್ನು ಬರೆದಿದ್ದು, ಆಡಳಿತದ ಕುರಿತು ಮಾಹಿತಿ ಕೋರಿ ಡೆಮಾಕ್ರಾಟ್ ಸಂಸದರು ಸಲ್ಲಿಸುವ ಮನವಿಗಳನ್ನು ಪುರಸ್ಕರಿಸದಂತೆ ವಿವಿಧ ಇಲಾಖೆಗಳಿಗೆ ನೀಡಿರುವ ಸೂಚನೆಯನ್ನು ಹಿಂತೆಗೆದುಕೊಳ್ಳಬೇಕೆಂದು ಟ್ರಂಪ್ ಅವರನ್ನು ಆಗ್ರಹಿಸಿದ್ದ್ಜಾರೆ..
ಮಾಹಿತಿಗಳನ್ನು ಒದಗಿಸುವುದನ್ನು ತಡೆಗಟ್ಟಿರುವ ಟ್ರಂಪ್ ಆಡಳಿತದ ಕ್ರಮವನ್ನು ಈ ವಾರದ ಆರಂಭದಲ್ಲಿ ನಡೆದ ಅಮೆರಿಕದ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ಆಡಳಿತರೂಢ ಡೆಮಾಕ್ರಾಟರು ಹಾಗೂ ರಿಪಬ್ಲಿಕನ್ನರು ತೀವ್ರವಾಗಿ ಟೀಕಿಸಿದ್ದರು.ಟ್ರಂಪ್ ಆಡಳಿತವು ತಾನು ಎಸಗಿದ ಪ್ರಮಾದಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿರುವುದಾಗಿ ಡೆಮಾಕ್ರಾಟರು ಆಪಾದಿಸಿದರು.
ಮಾಹಿತಿಯನ್ನು ಒದಗಿಸದಂತೆ ಟ್ರಂಪ್ ನೀಡಿರುವ ಸೂಚನೆಯನ್ನು ವಿವೇಚನಾರಹಿತವಾದುದು ಹಾಗೂ ಅಮೆರಿಕದ ಸಂವಿಧಾನಕ್ಕೆ ವಿರುದ್ಧವಾದುದಾಗಿಟದೆ ಎಂದು 1981ರಿಂದೀಚೆಗೆ ಅಮೆರಿಕದ ಸೆನೆಟ್ ಸದಸ್ಯರಾಗಿರುವ ಗ್ರಾಸ್ಲೆ ಟೀಕಿಸಿದ್ದಾರೆ.
ಈ ಮಧ್ಯೆ ಗ್ರಾಸ್ಲೆಯವರ ಪತ್ರದ ಬಗ್ಗೆ ಶ್ವೇತಭವನದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.







